Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಿಜಯೇಂದ್ರ ನಮ್ಮ ನಾಯಕ ಅಂತ ಒಪ್ಪಲ್ಲ, ಅವನಿಗೆ ಐಡಿಯಾಲಜಿ ಇಲ್ಲ: ಶಾಸಕ ರಮೇಶ್‌ ಜಾರಕಿಹೊಳಿ ಕಿಡಿ

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕಿಡಿ ಕಾಡಿರುವ ರಮೇಶ್‌ ಜಾರಕಿಹೊಳಿ, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಎಂದು ನಾನೆಂದೂ ಒಪ್ಪೋದಿಲ್ಲ ಎಂದು ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ನಾಯಕರ ಸಭೆಯ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ತಪ್ಪು ಮಾಡಿದವರಿಗೆ ಹಿರಿಯರು ಬೈದಿದ್ದಾರೆ. ಇಂತಿಂಥವರಜ ಇಂತಿಂಥ ಕೆಲಸ ಮಾಡಬೇಕು ಎಂದು ವರಿಷ್ಠರು ನಮಗೆ ಟಾಸ್ಕ್‌ ನೀಡಿದ್ದಾರೆ. ಟಾಸ್ಕ್‌ನಲ್ಲಿ ನಾನು ವಿಫಲವಾದರೆ ನನ್ನನ್ನು ಒದ್ದು ಹೊರಹಾಕಿ ಎಂದು ಹೇಳಿದ್ದೇನೆ. ಅಲ್ಲಿ ಏನೇನು ಚರ್ಚೆಯಾಯಿತು ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಬ್ಬ ಭ್ರಷ್ಟ, ಪಕ್ಷದಲ್ಲಿ ಅವನಿನ್ನೂ ಜೂನಿಯರ್‌, ಅವನಿಗೆ ಐಡಿಯಾಲಜಿ ಇಲ್ಲ. ಬಿಜೆಪಿಯ ಭ್ರಷ್ಟ ಎಂದೇ ವಿಜಯೇಂದ್ರನಿಗೆ ಲೇಬಲ್‌ ಇದೆ. ಮುಂದಿನ ಅಧ್ಯಕ್ಷ ಯಾರೆಂದು ಪಕ್ಷ ತೀರ್ಮಾನ ಮಾಡಬೇಕು. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ. ಹಾಗಂತ ನಾನೇನೂ ಯಡಿಯೂರಪ್ಪ ವಿರೋಧಿಯಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಅವರ ಬಗ್ಗೆ ಗೌರವವಿದೆ. ಆದರೆ, ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

 

 

 

 

 

 

Tags: