Mysore
22
broken clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ವಿಪಕ್ಷ ನಾಯಕ ಆರ್‌.ಅಶೋಕ್‌ ವಿರುದ್ಧ ನಡೆದ ಷಡ್ಯಂತ್ರ ಕಂಡು ದಿಗ್ಬ್ರಮೆ: ಡಿಸಿಎಂ ಡಿಕೆಶಿ

ಬೆಂಗಳೂರು: ಶಾಸಕ ಮುನಿರತ್ನ ಅವರು ಆರ್‌.ಅಶೋಕ್‌ ವಿರುದ್ಧ HIV ಸೋಂಕು ಹರಡಲು ಷಡ್ಯಂತ್ರ ನಡೆಸಿದ್ದರು ಎಂಬ ಸುದ್ದಿ ನೋಡಿ ನನಗೆ ದಿಗ್ಬ್ರಮೆ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದರು.

ಇಂದು(ಸೆ.21) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಸಕ ಮುನಿರತ್ನ ಅವರು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮೇಲೆ HIV ಸೋಂಕು ಹರಡುವಿಕೆಯ ಸಂಚು ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಕೇಳಿ ನನಗೆ ದಿಗ್ಬ್ರಮೆಯಾಗುತ್ತಿದೆ. ವಿಪಕ್ಷ ನಾಯಕ ಆರ್‌.ಅಶೋಕ್‌ ಅವರ ಆರಂಭದ ಮಾತುಗಳನ್ನು ನೋಡಿದ್ದೀನಿ. ಆದರೆ ಎರಡನೇ ಬಾರಿ ಮಾತುಗಳನ್ನು ಕೇಳಿಲ್ಲ ಎಂದು ಹೇಳಿದರು.

ಶಾಸಕ ಮುನಿರತ್ನ ಅವರು ನಡೆಸಿರುವ ಸಂಚಿನ ಬಗ್ಗೆ ಅಶೋಕಣ್ಣ, ವಿಜಯೇಂದ್ರಣ್ಣ ಹಾಗೂ ಸಿ.ಟಿ.ರವಿಯಣ್ಣ ಅವರು ಈ ಸಂಚಿನ ಬಗ್ಗೆ ಮಾತನಾಡಲಿ, ಈ ಬಗ್ಗೆ ಸತ್ಯ ಏನಿದೆ ಎಂಬುದನ್ನು ಕುರಿತು ಪರಿಶೀಲಿಸಿ ತಿಳಿಸಬೇಕು. ನಂತರ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಂಸದ ಡಾ.ಮಂಜುನಾಥ್‌ ಅವರು ಸಹ ಉತ್ತರಿಸಬೇಕು ಎಂದು ಬಿಜೆಪಿ ಶಾಸಕರನ್ನು ಟೀಕಿಸಿದರು.

ಶಾಸಕ ಅಶ್ವತ್ಥ್ ನಾರಾಯಣ್‌ ಅವರು ಡಿ.ಕೆ.ಬ್ರದರ್ಸ್‌ ಅವರಿಂದ ಸಂಚು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವತ್ಥ್ ಅವರು ನನ್ನನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿ ಅವರು ನೀಡಿರುವ ಈ ಹೇಳಿಕೆಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದರು.

Tags:
error: Content is protected !!