ದಾವಣಗೆರೆ: ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿದ ಅವರು, ಜನ ಅಭಿಮಾನಕ್ಕಾಗಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗುತ್ತಾರೆ. ಆದರೆ ಅದು ಈ ಅವಧಿಗೆ ಅಲ್ಲ. ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.
ನಮ್ಮ ಮೇಲಿನ ಅಭಿಮಾನಕ್ಕೆ ಜನ ಆ ರೀತಿ ಘೋಷಣೆ ಕೂಗುತ್ತಾರೆ. ನಾನು ಮಾತ್ರ ಈಗ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿಲ್ಲ. ಈಗ ಯಾರಾಗುತ್ತಾರೆ ಆಗಲಿ. ನಾನು ಮುಂದಿನ ಚುನಾವಣೆಯಲ್ಲಿ ಆಕಾಂಕ್ಷಿ ಎಂದು ಹೇಳಿದರು.




