Mysore
17
clear sky

Social Media

ಗುರುವಾರ, 29 ಜನವರಿ 2026
Light
Dark

ಚನ್ನಪಟ್ಟಣ ಉಪಚುನಾವಣೆಗೆ ನಾನೇ ಮೈತ್ರಿ ಅಭ್ಯರ್ಥಿ : ಸಿ.ಪಿ ಯೋಗೇಶ್ವರ್

ರಾಮನಗರ : ಚನ್ನಪಟ್ಟಣ ಉಪಚುನಾವಣೆಗೆ ನಾನೇ ಮೈತ್ರಿ ಅಭ್ಯರ್ಥಿ, ಅಧಿಕೃತವಾಗಿ ಘೋಷಣೆಯಾಗಬೇಕಿರುವುದೇ ಬಾಕಿ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ ಹೇಳಿದ್ದಾರೆ.

ಚೆನ್ನಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು, ಎಚ್‌ ಡಿ ಕುಮಾರಸ್ವಾಮಿ ಅವರು ನನ್ನನ್ನೆ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಕಳೆದ ವಾರ ಅವರನ್ನ ಭೇಟಿ ಮಾಡಿ ಚರ್ಚೆಮಾಡಿದ್ದೇನೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್‌ ನವರು ಚುನಾವಣೆಗೆ ಹೋಗ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಎಚ್‌ಡಿಕೆ ನನ್ನನ್ನೆ ನಿಲ್ಲುವಂತೆ ಹೇಳಿದ್ದಾರೆ. ಆದರೆ ಅಧಿಕೃತ ಅನುಮೋದನೆ ಸಿಗಬೇಕು ಅಷ್ಟೇ. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು  ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಎನ್‌ ಡಿಎ ಮೈತ್ರಿಯಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದಾರೆ. ಬಹಳ ಎತ್ತರದ ಸ್ಥಾನಕ್ಕೆ ಹೋಗಿದ್ದಾರೆ. ಎಚ್‌ ಡಿ ಕೆ ಚನ್ನಪಟ್ಟಣಕ್ಕೆ ಬಾರದೇ ಇದ್ದರೆ ನಾನು ಸೋಲನ್ನೆ ಕಾಣುತ್ತಿರಲಿಲ್ಲ. ಚನ್ನಪಟ್ಟಣ ಜನ ನನ್ನನ್ನ ಕೈ ಬಿಡುತ್ತಿರಲಿಲ್ಲ. ನೀವು ಬಂದ ಮೇಲೆ ನಮ್ಮ ಸಮುದಾಯ ನಿಮ್ಮ ಕೈ ಹಿಡಿದು ಎರಡು ಬಾರಿ ಗೆಲ್ಲಿಸಿದೆ . ಹಾಗಾಗಿ ಕುಮಾರಸ್ವಾಮಿ ಅವರೇ ಬಂದು ನಮ್ಮ ಚುನಾವಣೆ ಮಾಡಬೇಕು ಎಂದು ಸಿಪಿವೈ ಹೇಳಿದರು

Tags:
error: Content is protected !!