ಕಳೆದ ವರ್ಷ 2023ರಲ್ಲಿ ಅಪ್ರಾಪ್ತ ವಯಸ್ಸಿನಲ್ಲಿಯೇ ಗರ್ಭ ಧರಿಸಿದ ಬಾಲಕಿಯರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, ಕರ್ನಾಟಕದಲ್ಲಿ ಒಟ್ಟು 28,657 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಜಿಲ್ಲಾವಾರು ಅಂಕಿಅಂಶವನ್ನೂ ಸಹ ನೀಡಿದೆ. ಬೆಂಗಳೂರು, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳೆದ ವರ್ಷ 2000ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಗರ್ಭಾವತಿಯಾಗಿದ್ದಾರೆ.
ಇನ್ನು ಈ ರೀತಿ ಅಪ್ರಾಪ್ತ ಬಾಲಕಿಯರು ಗರ್ಭ ಧರಿಸಲು ಹಲವು ಕಾರಣಗಳಿದ್ದು, ಬಾಲ್ಯ ವಿವಾಹ ಪ್ರಮುಖ ಕಾರಣ ಎನ್ನಬಹುದು. ರಾಜ್ಯದಲ್ಲಿ ಗ್ರಾಮದಿಂದ ರಾಜ್ಯ ಮಟ್ಟದವರೆಗೆ 59000ಕ್ಕೂ ಹೆಚ್ಚು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಇದ್ದರೂ ಸಹ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳಿರುವುದು ಆಘಾತಕಾರಿಯಾಗಿದೆ.
ಜಿಲ್ಲಾವಾರು ಅಂಕಿಅಂಶ: ಬೆಂಗಳೂರು ನಗರ 2815, ಬೆಳಗಾವಿ 2754, ವಿಜಯಪುರ 2004, ಬಳ್ಳಾರಿ 1896, ಕಲಬುರಗಿ 1511, ಚಿತ್ರದುರ್ಗ 1412, ತುಮಕೂರು 1375, ಮೈಸೂರು 1370, ರಾಯಚೂರು 1252, ಬಾಗಲಕೋಟೆ 1193, ಬೀದರ್ 1143, ಯಾದಗಿರಿ 921, ಕೋಲಾರ 869, ಹಾಸನ 859, ದಾವಣಗೆರೆ 857, ಮಂಡ್ಯ 846, ಹಾವೇರಿ 713, ಶಿವಮೊಗ್ಗ 596, ಕೊಪ್ಪಳ 571, ಚಿಕ್ಕಬಳ್ಳಾಪುರ 567, ಧಾರವಾಡ 489, ಬೆಂಗಳೂರು ಗ್ರಾಮಾಂತರ 466, ಚಿಕ್ಕಮಗಳೂರು 435, ರಾಮನಗರ 432, ಗದಗ 303, ಕೊಡಗು 270, ಉತ್ತರ ಕನ್ನಡ 184, ದಕ್ಷಿಣ ಕನ್ನಡ 135, ಉಡುಪಿ 56.