ಬೆಂಗಳೂರು: ಪ್ರಭಾವಿ ಸಚಿವರೊಬ್ಬರ ಮೇಲೆ ಹನಿಟ್ರ್ಯಾಪ್ ಆಗಿದ್ದು, ಅವರ ತೇಜೋವಧೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಮಾಡಿ ನಮ್ಮ ಸರ್ಕಾರದ ಒಂದು ವಿಕೆಟ್ ಬೀಳಿಸಲು ಯತ್ನಿಸಲಾಗಿದೆ. ಆದರೆ, ಆ ವಿಕೆಟ್ ಸುಲಭವಾಗಿ ಬಿದ್ದಿಲ್ಲ. ಹನಿಟ್ರ್ಯಾಪ್ ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹನಿಟ್ರ್ಯಾಪ್ ಮಾಡಲೆಂದೇ ಒಂದು ಜಾಲ ಇದೆ. ಸಚಿವರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ರಾಜಕೀಯ ಅತ್ಯಂತ ಕೆಳಮಟ್ಟಕ್ಕೆ ಹೋಗಿದೆ. ಪ್ರಸಿದ್ದ ರಾಜಕೀಯ ನಾಯಕರ ಹನಿಟ್ರ್ಯಾಪ್ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಅವಧಿಯಲ್ಲೂ ಹನಿಟ್ರ್ಯಾಪ್ ಆಗಿತ್ತು. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.





