ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಚೀಟಿ ನೀಡಿದವರು ಯಾರು? ಅವರು ಚೀಟಿ ನೀಡಿದ ಬಳಿಕವೇ ಅವರು ಹನಿಟ್ರ್ಯಾಪ್ ಬಗ್ಗೆ ಚರ್ಚಿಸಿದರು. ಹಾಗಾಗಿ ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಬಿಜೆಪಿ ಸುರೇಶ್‌ಗೌಡ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು(ಮಾರ್ಚ್.21) ಈ ಕುರಿತು ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು ಮಾತನಾಡುತ್ತಿದ್ದಾಗ ಆಡಳಿತ ಪಕ್ಷದಿಂದ ಅವರಿಗೆ ಒಂದು ಚೀಟಿ ಬಂತು. ಚೀಟಿ ಬಂದ ಮೇಲೆ ಯತ್ನಾಳ್ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತಾಡಿದರು. ಅವರಿಗೆ ಆ ಚೀಟಿ ನೀಡಿದವರು ಯಾರು? ಅಥವಾ ಅವರಿಗೆ ಚೀಟಿ ನೀಡಿದವರು ಸಿಎಂಗೆ ಆಪ್ತರಾ? ಇದರ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ಹಿನ್ನೆಲೆ ಏನು?
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾರ್ಷಲ್ ಒಬ್ಬರು ಚೀಟಿ ನೀಡಿದರು. ಆ ನಂತರವೇ ಸದನದಲ್ಲಿ ನೇರವಾಗಿ ಹಾಸನದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪದ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡಿದ್ದರು.





