ಕೋಲಾರ: ಇಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಚಿವ ಕೆ.ಎನ್.ರಾಜಣ್ಣ ಅವರು ಇಂದು ನಗರಕ್ಕೆ ಭೇಟಿ ನೀಡಿದ್ದು, ಅವರಿಗೆ ಹನಿಟ್ರ್ಯಾಪ್ ಪ್ರಕರಣದ ಹಿನ್ನೆಲೆಯಲ್ಲಿ ಕೋಲಾರ ನಗರ ಪೊಲೀಸ್ ಇಲಾಖೆಯೂ ಬಿಗಿ ಭದ್ರತೆಯನ್ನು ಆಯೋಜಿಸಿದೆ.
ಈ ವೇಳೆ ನಗರದಲ್ಲಿ ಇಂದು(ಮಾರ್ಚ್.22) ಹನಿಟ್ರ್ಯಾಪ್ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ರಾಜಣ್ಣ ಅವರು, ನಾನು ಈಗಾಗಲೇ ಏನೇನೂ ಹೇಳೇಬೇಕೋ ಅದೆನ್ನೆಲ್ಲಾನ್ನೂ ವಿಧಾನಸಭೆಯ ಸದನದಲ್ಲಿ ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಹೇಳುವಂತಹದ್ದು ಏನೂ ಇಲ್ಲ. ಇಂತಹ ಪ್ರಕರಣಗಳು ಇದೇ ಮೊದಲು ಅಲ್ಲ ಅಥವಾ ಕೊನೆಯೂ ಅಲ್ಲ. ನಿರಂತರವಾಗಿ ನಡೆಯುತ್ತಿರುತ್ತವೆ ಎಂದರು.
ಇದೇ ಸಂದರ್ಭದಲ್ಲಿ ವಿಪಕ್ಷದ 18 ಶಾಸಕರನ್ನು ಅಮಾನತುಗೊಳಿಸಿದರ ಬಗ್ಗೆ ಮಾತನಾಡಿದ ಅವರು, ವಿಧಾನಸೇ ಅಧಿವೇಶನದಲ್ಲಿ ಶುಕ್ರವಾರ ನಡೆದ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆ ತರುವತಂಹದ್ದು. ಜನಪರವಾದ ವಿಚಾರದಲ್ಲಿ ಗಲಾಟೆ ನಡೆದಿದ್ದರೆ ಒಪ್ಪುವಂತಹದಾಗಿದೆ. ಆದರೆ ವಿರೋಧ ಪಕ್ಷದವರು ಬಜೆಟ್ ಮೇಲಿನ ಉತ್ತರಕ್ಕೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಈ ಘಟನೆಯೊಂದು ಪೂರ್ವಯೋಜಿತ ಪಿತೂರಿ ಎಂದು ಹೇಳಿದರು.





