Mysore
34
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ಹನಿಟ್ರ್ಯಾಪ್‌ ತನಿಖೆ ಸಿಎಂಗೆ ಬಿಟ್ಟಿದ್ದು: ಕೆಎನ್‌ ರಾಜಣ್ಣ

ಕೋಲಾರ: ಹನಿಟ್ರ್ಯಾಪ್‌ ತನಿಖೆ ಸಿಎಂಗೆ ಬಿಟ್ಟಿದ್ದು. ಆದರೆ, ಹನಿಟ್ರ್ಯಾಪ್‌ ಆರೋಪ ಮುಂದೆಯೂ ಬರಬಹುದು ಎಂದು ಸಹಕಾರ ಸಚಿವ ಕೆಎನ್‌ ರಾಜಣ್ಣ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌ ವಿಚಾರವಾಗಿ ವಿಧಾನಸಭೆಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಿದ್ದೇನೆ. ಅದನ್ನೂ ಹೊರತು ಪಡಿಸಿ ಹೇಳುವ ಆಗಿಲ್ಲ. ಇದರ ಬಗ್ಗೆ ತನಿಖೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದು. ಈ ಆರೋಪ ಮೊದಲೂ ಅಲ್ಲ, ಕೊನೆಯೂ ಅಲ್ಲ ಮುಂದೆ ಬಂದರು ಬರಬಹುದು ಎಂದು ಹೇಳಿದರು.

ಇನ್ನು ಹನಿಟ್ರ್ಯಾಪ್‌ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಜೊತೆ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿದಿನವೂ ಅವರ ಜೊತೆ ಮಾತನಾಡುವೆ ಎಂದು ತಿಳಿಸಿದರು.

ಇನ್ನು ಸ್ಪೀಕರ್‌ ಪೀಠಕ್ಕೆ ಅವಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಾನಾಗಿದ್ದರೆ ಮುಂಚಿತವಾಗಿ ಈ ಕೆಲಸ ಮಾಡುತ್ತಿದ್ದೆ. ಬಜೆಟ್‌ಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ಶಾಸಕರ ಪ್ರಶ್ನೆಗೆ ಸಿಎಂ ಉತ್ತರ ಕೊಡುವ ಸಂದರ್ಭದಲ್ಲಿ ಆಡಚಣೆ ಉಂಟುಮಾಡಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ನಾನು ಸ್ಪೀಕರ್‌ ಆಗಿದ್ದರೆ ಮೊದಲೇ ಸಸ್ಪೆಂಡ್‌ ಮಾಡುತ್ತಿದ್ದೆ ಎಂದು ನುಡಿದರು.

Tags:
error: Content is protected !!