ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಣ್ಣ ಅವರು ದೂರು ಕೊಡದೇ ನಾನೇನು ಮಾಡಲಿ? ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣ ಏನು ಮಾಡುತ್ತಾರೋ ನೋಡೋಣ. ಅವರಿಗೆ ಬಹಳ ಜನ ಆಪ್ತರು ಇದ್ದಾರೆ. ಅವರು ಯಾರ ಜೊತೆ ಏನು ಮಾತನಾಡುತ್ತಾರೋ ಗೊತ್ತಿಲ್ಲ ಎಂದರು.
ಹನಿಟ್ರ್ಯಾಪ್ ವಿಚಾರ ಬರೀ ಬೋಗಸ್ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಸಚಿವ ಕೆ.ಎನ್.ರಾಜಣ್ಣ ದಿನಪೂರ್ತಿ ನನ್ನ ಜೊತೆಗೇ ಇದ್ದರು. ರಾಜಣ್ಣಗೆ ನಾನು ಸೇರಿದಂತೆ ಹಲವರು ಆಪ್ತರಿದ್ದಾರೆ ಎಂದರು.





