Mysore
32
broken clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಇಂದಿನಿಂದ ಹೊಸ ೩ ಕ್ರಿಮಿನಲ್ ಕಾನೂನುಗಳು ಜಾರಿ : ಗೃಹ ಸಚಿವರು ಹೇಳಿದಿಷ್ಟು

ಬೆಂಗಳೂರು : ಇಂದಿನಿಂದ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿಯಾಗಲಿವೆ. ಭಾರತೀಯ ನ್ಯಾಯ ಸಂಹಿತಾ , ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳು ಜಾರಿಗೆ ಬರುತ್ತಿವೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು,  ಇಂದಿನಿಂದ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿಯಾಗಿದೆ.ಕಾನೂನು ಜಾರಿ ಬಗ್ಗೆ ನಾವು ಒಂದು ಆ್ಯಪ್‌ ಮಾಡಿದ್ದೇವೆ. ಇನ್ನು ಮುಂದೆ ದಾಖಲಾಗುವ ಕೇಸ್‌ ಗಳಿಗೆ ಇದು ಅನ್ವಯವಾಗಲಿದೆ. ಇದರ ಪರಿಣಾಮ ಏನು ಅಂತಾ ಈಗಲೇ ಹೇಳಲು ಆಗಲ್ಲ. ಸ್ವಲ್ಪ ದಿನಗಳ ನಂತರ ಇದರ ಸೆಕ್ಷನ್‌ ಬಗ್ಗೆ ಗೊತ್ತಾಗುತ್ತದೆ. ಹೊಸ ಕಾನೂನು ಬಗ್ಗೆ ಕಾನ್ಸ್‌ ಟೇಬಲ್‌ ನಿಂದ ಹಿಡಿದು ಎಲ್ಲರಿಗೂ ತರಬೇತಿ ನೀಡಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್‌ ಸಹ ಸಿದ್ಧಪಡಿಸಲಾಗಿದೆ.ಇಡೀ ದೇಶದಲ್ಲಿ ಮೂರು ಕಾನೂನು ಜಾರಿಯಾಗಿವೆ.ಫೀಡ್‌ ಬ್ಯಾಕ್‌ ನೋಡಿಕೊಂಡು ಪರಿಷ್ಕರಣೆ ಮಾಡುಬಹುದು ಎಂದು ಹೇಳಿದರು.

Tags:
error: Content is protected !!