ಬೆಂಗಳೂರು: ಹಾಸನ ಪನ್‌ಡ್ರೈವ್ ಹಾಗೂ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಉಚ್ಛಾಟಿತ ಮುಖಂಡ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಈ ಬಗ್ಗೆ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರಜ್ವಲ್ ಬಂಧನ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರೆಯೆ ನೀಡಿದ್ದಾರೆ. ಆ ವೇಳೆ ಪ್ರಜ್ವಲ್ ಯಾಕೆ ಬಂದು ಅರೆಸ್ಟ್ ಆದರು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ವಲ್ ವಿದೇಶದಲ್ಲಿದ್ದಾ ಅವರನ್ನ ಬಂಧಿಸಿ ದೇಶಕ್ಕೆ ವಾಪಸ್ ಕರೆ ತರುವುದು ಸಾಧ್ಯವಿಲ್ಲದ ಕೆಲಸ. ಎಲ್ಲದಕ್ಕೂ ಅದರದೇ ಆದ ಪ್ರಕ್ರಿಯೆಗಳಿರುತ್ತದೆ. ಆರೋಪಿಯೊಬ್ಬ ವಿದೇಶದಲ್ಲಿ ಅಡಗಿ ಕುಳಿತಾಗ ಆತನನ್ನು ಬಂಧಿಸಲು ಕೇಂದ್ರೀಯ ತನಿಖಾ ದಳ ಇಂಟರ್ ಪೋಲ್‌ಗೆ ಮಾಹಿತಿ ನೀಡಿ, ನಂತರ ಬ್ಲೂ ಕರ್ನಾರ್ ನೋಟಿಸ್ ಜಾರಿಗೊಳಿಸಬೇಕಾಗುತ್ತದೆ ಎಂದರು.
ಇನ್ನು ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸಾಗಿದ್ದರ ಮೂಲಕ ಏನೆಂಬುದರ ಬಗ್ಗೆ ಮಾತನಾಡಿರುವ ಪರಮೇಶ್ವರ್, ಈ ಬಾರಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಕಾಣುವುದು ನಿಶ್ಚಯವಾಗಿದೆ ಎಂದು ಭಾವಿಸಿ ಅವರು ಬಂಧನಕ್ಕೆ ಸಹಕರಿಸಿದ್ದಾರೆ. ಒಂದು ವೇಳೆ ಪ್ರಜ್ವಲ್ ಈ ಬಾರಿಯ ಚುನಾವಣೆಯಲ್ಲಿ ಸೋತರೇ, ಅವರ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ತಕ್ಷಣವೇ ರದ್ದಾಗಲಿದೆ. ಹೀಗಾಗಿ ಯಾವುದೇ ದಾರಿ ಇಲ್ಲದೇ ತವರಿಗೆ ಹಿಂತಿರುಗಿದ್ದಾರೆ ಎಂದು ಗೃಹ ಸಚಿವರು ಹೇಳಿದರು.





