Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ದೆಹಲಿಯಲ್ಲಿ ಮುಡಾ ಹಗರಣ ಚರ್ಚೆ ಮಾಡಿದ್ದೇವೆ: ಗೃಹ ಸಚಿವ ಜಿ.ಪರಮೇಶ್ವರ್‌

ಬೆಂಗಳೂರು: ಮುಡಾ ಹಗರಣ ಸೇರಿದಂತೆ ಪಕ್ಷ ಸಂಘಟನೆ ಬಗ್ಗೆಯೂ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಬಗ್ಗೆ ದೆಹಲಿಯಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿಳಿದ ಅವರು, ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಗೆ ಹೋಗಿ ಹೈಕಮಾಂಡ್‌ ಜೊತೆ ಚರ್ಚೆ ಮಾಡಿದ್ದೇನೆ. ಮುಡಾ ಹಗರಣ ಒಂದೇ ಅಲ್ಲ, ಪಕ್ಷ ಸಂಘಟನೆ ಬಗ್ಗೆಯೂ ಎಲ್ಲರು  ಚರ್ಚೆ ಮಾಡಿದ್ದೇವೆ. ಸಿಎಂ, ಡಿಸಿಎಂ ಹಾಗೂ ಹಲವು ಸಚಿವರು ಸಹ ದೆಹಲಿಗೆ ಬಂದಿದ್ದರು. ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಸಂಪೂರ್ಣ ಚರ್ಚೆ ಮಾಡಿದ್ದೇವೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನೀವು ನಿರೀಕ್ಷೆ ಮಾಡಿದಂತ ವಿಚಾರಗಳು ದೆಹಲಿಯಲ್ಲಿ ಏನು ಚರ್ಚೆಯಾಗಿಲ್ಲ. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ.  ಸಂದರ್ಭ ಬಂದಾಗ ಅರ್ಕಾವತಿ ಡಿನೋಟಿಫಿಕೇಷನ್‌ ವರದಿ ಬಹಿರಂಗ ಮಾಡುತ್ತೇವೆ. ಸರ್ಕಾರದಲ್ಲಿ ಎಲ್ಲವೂ ಪಾರದರ್ಶಕವಾಗಿರುತ್ತದೆ. ನಾವು ಏನನ್ನೂ ಮುಚ್ಚಿಡುವ ಕೆಲಸ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

 

Tags: