ಬೆಂಗಳೂರು : ಪ್ರೀತಂಗೌಡ ವಿರುದ್ಧ ಪೆನ್ ಡ್ರೈವ್ ಹಂಚಿದ ಆರೋಪ ಪ್ರಕರಣ ಪ್ರೀತಂಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನ ವಿಡಿಯೋ ಮಾಡಿ ವೈರಲ್ ಮಾಡಿದ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ಮತ್ತು ಪ್ರೀತಂಗೌಡ ಹಾಗೂ ಇವರ ಆಪ್ತರಾದ ಕಿರಣ್ ಶರತ್ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ಈ ಪ್ರಕರಣ ಸಂಬಂಧ ಮಾಜಿ ಶಾಸಕ ಪ್ರೀತಂಗೌಡರನ್ನ ಬಂಧಿಸದಂತೆ ಹೈಕೋರ್ಟ್ ಆದೇಶ ನೀಡಿದ್ದು, ತನಿಖೆ ಮುಂದುವರೆಸಲು ಎಸ್‌ಐಟಿಗೆ ಸೂಚನೆ ನೀಡಿದೆ. ಅಲ್ಲದೆ ತನಿಖೆಗೆ ಸಹಕರಿಸುವಂತೆ ಅರ್ಜಿದಾರ ಪ್ರೀತಂಗೌಡರಿಗೂ ಸಹ ಹೈಕೋರ್ಟ್ ಸೂಚಿಸಿದೆ.