Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

೬ ವರ್ಷಗಳ ಬಳಿ ಗೌರಿ ಲಂಕೇಶ್ ಕೊಲೆ ಆರೋಪಿಗಳಿಗೆ ಷರತ್ತುಬದ್ದ ಜಾಮೀನು

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿ ಆದೇಶ ಮಾಡಿದೆ.

ಎ೫ ಅಮಿತ್‌ ದಿಗ್ವೇಕರ್‌, ಎ೧೭ ಕೆ.ಟಿ.ನವೀನ್‌ ಕುಮಾರ್‌, ಎ೭ ಹೆಚ್‌ ಎಲ್‌ ಸುರೇಶ್‌ ಗೆ ಜಾಮೀನು ನೀಡಿ ನ್ಯಾ.ಎಸ್.‌ವಿಶ್ವಜಿತ್‌ ಶೆಟ್ಟಿ ಅವರಿಂದ ಏಕಸದಸ್ಯ ಪೀಠ ಆದೇಶ  ಹೊರಡಿಸಿದೆ.

ಆರೋಪಿಗಳ ಪರವಾಗಿ ಅರುಣ್‌ ಶ್ಯಾಮ್‌, ಮಧುಕರ್‌ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್‌ ವಾದ ಮಂಡಿಸಿ, ಕಳೆದ ೬ ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೆ ದೀರ್ಘ ಕಾಲ ಜೈಲಿನಲ್ಲಿಡುವಂತಿಲ್ಲ ಎಂಬ ತೀರ್ಪು ಇದೆ ಎಂದು ಹೇಳಿದರು.  ವಾದ ಆಲಿಸಿದ ಬಳಿಕ ನ್ಯಾಯಪೀಠ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಎ೧೧ ಮೋಹನ್‌ ನಾಯಕ್‌ ಗೆ ಜಾಮೀನು ಮಂಜೂರು ಆಗಿತ್ತು.

೨೦೧೭ ಸೆಪ್ಟೆಂಬರ್‌ ೫ ರಂದು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್‌ ಅವರನ್ನ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದೆ. ಇದುವರೆಗೂ ೧೮ ಆರೋಪಿಗಳು ಬಂಧನಕ್ಕೊಳಗಾಗಿದ್ದು, ೧೨೦೦ ಪುರಾವೆ ಹಾಗೂ ೫೦೦ ಕ್ಕೂ ವಿವಿಧ ಬಗೆಯ ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್‌ ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

Tags: