ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದು ಸಮಾವೇಶ ನಡೆಸಲು ಮುಂದಾಗಿದ್ದ ಬೆಂಬಲಿಗರಿಗೆ ಹೈಕಮಾಂಡ್ ಶಾಕ್ ನೀಡಿದೆ.
ಪಕ್ಷದಲ್ಲಿ ಪರಸ್ಪರ ಬಡಿದಾಟ, ಮೇಲಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಹೆಸರಿನಲ್ಲಿ ಸಮಾವೇಶ ನಡೆಸಬೇಕೆಂಬ ಆಪ್ತರ ಆಸೆಗೆ ಹೈಕಮಾಂಡ್ ತಣ್ಣೀರು ಹಾಕಿದೆ.
ಯಾವ ಸಮಾವೇಶವೂ ಬೇಡ, ಗೊಂದಲವೂ ಬೇಡ. ಎಲ್ಲರೂ ಸುಮ್ಮನೆ ಇರಿ ಎಂದು ದೆಹಲಿಯಿಂದ ಖಡಕ್ ಆಗಿ ಸೂಚನೆ ನೀಡಲಾಗಿದೆ.
ಇದೀಗ ಸಮಾವೇಶಕ್ಕೆ ಫುಲ್‌ಸ್ಟಾಪ್ ಬಿದ್ದಿದ್ದು, ಕ್ಷೇತ್ರವಾರು ಆಚರಣೆಗೆ ಬಿಎಸ್‌ವೈ ಬೆಂಬಲಿಗರು ಪ್ಲ್ಯಾನ್ ಮಾಡಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಚರಿಸುವ ಪ್ಲ್ಯಾನ್ ರೂಪಿಸಿದ್ದಾರೆ.





