Mysore
28
overcast clouds

Social Media

ಗುರುವಾರ, 13 ಮಾರ್ಚ್ 2025
Light
Dark

ಬೇಸಿಗೆಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಟಿಪ್ಸ್‌…

ಬೇಸಿಗೆ ಕಾಲ ಆರಂಭವಾಗಿದ್ದು, ಈ ಅವಧಿಯಲ್ಲಿ ಅತಿಯಾದ ಉಷ್ಣಾಂಶದಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆ ಸಂಭವಿಸುವ ಸಾಧ್ಯತೆಯಿದೆ. ಅತಿಯಾದ ಉಷ್ಣಾಂಶದಿಂದ ಸಂಭವಿಸಬಹುದಾದ ಅನಾರೋಗ್ಯ ಪರಿಸ್ಥಿತಿಗಳ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಹೊರಡಿಸಿದೆ.

ಹೆಚ್ಚು ನೀರು ಕುಡಿಯುವುದು
• ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ.
• ಪ್ರಯಾಣ ಮಾಡುವ ಸಮಯದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ.
• ಮೌಖಿಕ ಪುನರ್ಜಲೀಕರಣ ದ್ರಾವಣ (Oral Rehydration Solution – ORS), ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್ ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
• ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ. ಅನಾನಸ್, ಸೌತೆಕಾಯಿ, ಲೆಟೂಸ್, ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.

ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು
• ತಿಳಿ ಬಣ್ಣದ, ಅಳಕವಾದ  (loose fitting ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
• ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ದೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ. ಬಿಸಿಲಿನಿಂದ ರಕ್ಷಣೆ ಪಡೆಯುವುದು ಉತ್ತಮ.
• ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.

ಸದಾ ಎಚ್ಚರದಿಂದಿರಿ
ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು. ಅದರಂತೆ ಚಟುವಟಿಕೆಗಳನ್ನು ಯೋಚಿಸುವುದು ಉತ್ತಮ. ಹವಾಮಾನದ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು Karnataka State Natural Disaster Monitoring https://www.ksndme.org/default.aspx  ನಲ್ಲಿ ಮಾಹಿತಿಯನ್ನು ಪಡೆಯಬಹುದು.ಸಾಧ್ಯವಾದಷ್ಟು ಒಳಾಂಗಣದಲ್ಲಿರಿ
• ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ.
• ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು, ಹಗಲು ಹೊತ್ತಿನಲ್ಲ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿಡಿ. ಹಾಗೂ ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ, ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆಡಿಡಬೇಕು.

ಹೊರಾಂಗಣ ಚಟುವಟಿಕೆಗಳ ಸಂದರ್ಭದಲ್ಲಿ:
ಹೊರಾಂಗಣ ಚಟುವಟಿಕೆಗಳನ್ನು ಆದಷ್ಟೂ ದಿನದ ತಣ್ಣನೆಯ ಸಮಯದಲ್ಲಿ, ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಿ. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಪೂರ್ವಾಹ್ನ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ.
ಪೂರ್ವಾಹ್ನ 11 ಗಂಟೆಯಿAದ ಸಂಜೆ 4 ಗಂಟೆಯ ಅವಧಿಯಲ್ಲಿ ಹೊರಾಂಗಣ ಸಭೆಗಳು / ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ:
• ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ/ಪೆಂಡಾಲ್‌ನ ವ್ಯವಸ್ಥೆ ಮಾಡುವುದು
• ಉತ್ತಮ ಗಾಳಿಯ  (Air circulation ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು.
• ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವುದು.ದುರ್ಬಲ ವ್ಯಕ್ತಿಗಳಿಗೆ
ಬಿಸಿ ಗಾಳಿಯ ಒತ್ತಡ ಹಾಗೂ ಬಿಸಿ ಗಾಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದೆ. ಆದರೆ ಈ ಕೆಳಕಾಣಿಸಿದ ಗುಂಪಿನ ಜನರಿಗೆ ಹೆಚ್ಚು ಅಪಾಯವಿರುವ ಹಿನ್ನೆಯಲ್ಲಿ ಹೆಚ್ಚುವರಿ ಗಮನವನ್ನು ನೀಡುವುದು ಅಗತ್ಯವಾಗಿದೆ.
• ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು
• ಗರ್ಭಿಣಿಯರು
• ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು
• ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು
• ಆರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು.

ತಂಪಾದ ವಾತಾವರಣವಿರುವ ಪ್ರದೇಶದಿಂದ ಬಿಸಿಯಾದ ವಾತಾವರಣದ ಪ್ರದೇಶಕ್ಕೆ ಭೇಟಿ ನೀಡುವ ಜನರು: ಬಿಸಿ ಗಾಳಿಯ ಸಂದರ್ಭದಲ್ಲಿ ಸುಮಾರು ಒಂದು ವಾರದ ಅವಧಿಯನ್ನು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು (acclimatized)    ಮೀಸಲಿಡಬೇಕು ಹಾಗೂ ಈ ಅವಧಿಯಲ್ಲಿ ಹೆಚ್ಚು ನೀರನ್ನು ಸೇವಿಸಬೇಕು. ಹಂತ ಹಂತವಾಗಿ ಬಿಸಿಯಾದ ವಾತಾವರಣದಲ್ಲಿ ಚಟುವಟಿಕೆಗಳನ್ನು ನಡೆಸುವುದರಿಂದ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ.ಇತರ ಮುನ್ನೆಚ್ಚರಿಕಾ ಕ್ರಮಗಳು

• ಪ್ರತ್ಯೇಕವಾಗಿ / ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು.
• ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು / ಷಟರ್ ಗಳನ್ನು ಬಳಸಿ ಹಾಗೂ ರಾತ್ರಿಯ ಸಮಯದಲ್ಲಿ ಕಿಟಕಿಗಳನ್ನು ತೆರೆದಿಡಿ.
• ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ.
• ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು.

ಇವುಗಳನ್ನು ಮಾಡಬಾರದು
• ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಬೇಕು.
• ಮಧ್ಯಾಹ್ನದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು.
• ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ.
• ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಿ, ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
• ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ.
• ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.
• ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
• ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ, ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿಯಾಗಬಹುದು. 

ಎಚ್ಚರವಿರಲಿ ಅತಿಯಾದ ಶಾಖದಿಂದ ಈ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು :

• ತಲೆ ಸುತ್ತುವುದು / ಪ್ರಜ್ಞೆ ತಪ್ಪುವುದು
• ವಾಕರಿಕೆ ಅಥವಾ ವಾಂತಿಯಾಗುವುದು
• ಅತಿಯಾದ ಬಾಯಾರಿಕೆ
• ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ
• ತಲೆನೋವು
• ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತ.
ಅತಿಯಾದ ಉಷ್ಣತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು
• ಗಮನಿಸಿ – ನಿಮಗೆ ಅಥವಾ ಇಸ್ಮಾಥಿಗಾದರೂ ಅತಿಯಾದ ಉಷ್ಣತೆಯಿಂದ ಮೇಲೆ ತಿಳಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದರೆ.
• ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ. ನೀರಿನ ಸೇವನೆ ಅತ್ಯುತ್ತಮ.
• ತಕ್ಷಣವೇ ಸಹಾಯ ಹಾಗೂ ವೈದ್ಯಕೀಯ ನೆರವನ್ನು ಪಡೆಯಿರಿ.
• ದೇಹದ ಉಷ್ಣಾಂಶವನ್ನು ಪರೀಕ್ಷಿಸಿ.
ಮಾಂಸಖAಡಗಳಲ್ಲಿ ನೆಳೆಸವು ಕಂಡು ಬಂದಲ್ಲಿ (ವಿಶೇಷವಾಗಿ ಕಾಲು, ತೋಳು ಅಥವಾ ಹೊಟ್ಟೆಯ ಭಾಗ ಹಲವು ಸಂದರ್ಭಗಳಲ್ಲಿ ಬೇಸಿಗೆಯ ದಿನಗಳಲ್ಲಿ ನಿರಂತರ  fold    )
• ತಕ್ಷಣವೇ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ ಹಾಗೂ ಹೆಚ್ಚು ಎಲೆಕ್ಟೋಲೈಟ್ ಗಳನ್ನು ಹೊಂದಿದ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು ಸೇವಿಸಬೇಕು.
• ಅತಿಯಾದ ಉಷ್ಣತೆಯಿಂದ ಉಂಟಾಗುವ ಸ್ನಾಯು ಸೆಳೆತವು ಗಂಟೆಯ ಅವಧಿಯಲ್ಲಿ ಕಮನಗೊಳ್ಳದಿದ್ದರೆ, ವೈದ್ಯಕೀಯ ನೆರವನ್ನು ಪಡೆಯಬೇಕು.ಈ ಕೆಳಗಿನ ಚಿಹ್ನೆಗಳು ಅಪಾಯಕಾರಿಯಾಗಿದ್ದು, ಇವುಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯಿರಿ.

ವಯಸ್ಕರಲ್ಲಿ
• ಅರೆ ಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ದ್ವಂದ್ವ. ಗಾಬರಿಗೊಳ್ಳುವುದು ಅಥವಾ ಕೋಮಾ ಸ್ಥಿತಿಯನ್ನು ತಲುಮವುದು.
• ಬಿಸಿ ಹಾಗೂ ಕೆಂಪಾದ ಬಗು ಚರ್ಮ
• ದೇಹದ ಉಷ್ಣತೆ ≥40ಲಿಅ ಅಥವಾ 104ಲಿಈ
• ಆತಿಯಾಗಿ ನಡಿಮಿಡಿಯೊಳುವುದು.
• ಕನಿಷ್ಠ ಮೂತ್ರ ವಿಸರ್ಜನೆಯ ಪ್ರಮಾಣ
• ಅತಿಯಾದ  (Throbbing)  ತಲೆನೋವು
• ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು
• ಆತಂಕ, ತಲೆಸುತ್ತುವಿಕೆ ಹಾಗೂ ಪ್ರಜ್ಞೆ ತಪ್ಪುವುದು
• ಮಾಂಸ ಖಂಡಗಳಲ್ಲಿ ಸುಸ್ತು ಅಥವಾ ಸೆಳೆತ
• ಆಲಸ್ಯ / ಅರೆ ಪ್ರಜ್ಞಾವಸ್ಥೆ
• ಮೂರ್ಛೆ ಹೋಗುವುದು
• ವಾಕರಿಕೆ ಮತ್ತು ವಾಂತಿ
• ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ
• ಹೆಚ್ಚಿದ ಹೃದಯದ ಬಡಿತ/ ವೇಗವಾದ ಉಸಿರಾಟ
• ಸಹಾಯಕ್ಕೆ ಕಾಯುತ್ತಿರುವ ಅವಧಿಯಲ್ಲಿ ವ್ಯಕ್ತಿಯ ದೇಹದ ಉಷಾಂಶವನ್ನು ಈ ಕೆಳಕಂಡ ವಿಧಾನದಲ್ಲಿ ಕಡಿಮೆಗೊಳಿಸಿ

ಮಕ್ಕಳಲ್ಲಿ
• ಆಹಾರ ಸೇವಿಸಲು ನಿರಾಕರಿಸುವುದು
• ದೇಹದ ಭಾಗಗಳಿಗೆ ಹಾಗೂ ಬಟ್ಟೆ ಮೇಲೆ ತಣ್ಣಗಿನ ನೀರನ್ನು ಹಾಕುವುದು.
• ಹಾಗೂ ವ್ಯಕ್ತಿಯ ದೇಹದ ಮೇಲೆ ಹೆಚ್ಚು ಗಾಳಿಯನ್ನು ಬೀಸುವುದು
• ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು
• ಆಲಸ್ಯ/ ಅರೆ ಪ್ರಜ್ಞಾವಸ್ಥೆ
• ಮೂರ್ಛೆ ಹೋಗುವುದು
• ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ

ಸಹಾಯಕ್ಕಾಗಿ ಕಾಯುತ್ತಿರುವ ಅವಧಿಯಲ್ಲಿ ವ್ಯಕ್ತಿಯ ದೇಹದ ಉಷ್ಣವನ್ನು ಈ ಕೆಳಕಂಡ ವಿಧಾನದಲ್ಲಿ ಕಡಿಮೆಗೊಳಿಸಿ
• ಸಾಧ್ಯವಿದ್ದಲ್ಲಿ ತಂಪಾದ ಪ್ರದೇಶಕ್ಕೆ ಸ್ಥಳಾಂತರಗೊಳಿಸಿ,
• ದೇಹದ ಭಾಗಗಳಿಗೆ ಹಾಗೂ ಬಟ್ಟೆ ಮೇಲಿನ ತಣ್ಣಗಿನ ನೀರನ್ನು ಹಾಕುವುದು,
• ಹಾಗೂ ವ್ಯಕ್ತಿಯ ದೇಹದ ಮೇಲೆ ಹೆಚ್ಚು ಗಾಳಿಯನ್ನು ಬೀಸುವುದು
• ಯಾರಾದರೂ ಹೆಚ್ಚಿದ ದೇಹದ ಉಷ್ಣಾಂಶ ಹಾಗೂ ಪ್ರಜ್ಞೆ ತುವುದು, ಗೊಂದಲದಲ್ಲಿದ್ದು, ಬೆವರುವಿಕೆಯು ಸ್ಥಗಿತವಾಗಿದ್ದರೆ ತಕ್ಷಣವೇ 108/102 ಗೆ ಕರೆ ಮಾಡಬಹುದು.

Tags: