ಬೆಂಗಳೂರು: ಇನ್ನು ಮುಂದೆ ರಾಜ್ಯ ಸರ್ಕಾರವೇ 108 AMBULANCEಗಳ ನಿರ್ವಹಣೆ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 108 ಆಂಬುಲೆನ್ಸ್‌ಗಳ ನಿರ್ವಹಣೆ ಕೆಲಸವನ್ನು ಯಾವುದೇ ಏಜೆನ್ಸಿ ಹಾಗೂ ಸಂಸ್ಥೆಗೆ ಕೊಡಲ್ಲ. ಅದನ್ನು ಸರ್ಕಾರವೇ ನಿರ್ವಹಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ:- ಲಕ್ಷ್ಯ ಶೂಟಿಂಗ್ ಕ್ಲಬ್ ; ಹೈ ಪರ್ಫಾಮೆನ್ಸ್ ಸೆಂಟರ್ ಸ್ಥಾಪನೆಗೆ ಸಹಿ ಹಾಕಿದ ಆಕ್ಸಿಸ್ ಬ್ಯಾಂಕ್
ಇನನು 3 ಸಾವಿರ ಸಿಬ್ಬಂದಿಗೆ ವೇತನವಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಳೆದ ಸರ್ಕಾರದಿಂದ ಓಪನಿಂಗ್ ಬ್ಯಾಲೆನ್ಸ್ ಕಡಿಮೆಯಾಗಿದೆ. ಹೀಗಾಗಿ ನಾವು ರಾಜ್ಯ ಸರ್ಕಾರದಿಂದ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರವು ಕೂಡ ಹಣ ಬಿಡುಗಡೆ ಮಾಡದ ಕಾರಣ ಕೊಂಚ ಲೇಟ್ ಆಗಿದೆ. ಇನ್ನೆರಡು ದಿನದಲ್ಲಿ ವೇತನ ಆಗಬಹುದು. ನಾವು ಯಾವುದೇ ವೇತನ ತಡೆಹಿಡಿದಿಲ್ಲ ಎಂದು ಹೇಳಿದರು.





