Mysore
26
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಅಬ್ಬಬ್ಬಾ ಇಲ್ಲಿ ಒಂದು ಪ್ಲೇಟ್‌ ಇಡ್ಲಿ ಬೆಲೆ ಬರೋಬ್ಬರಿ 500 ರೂಪಾಯಿ: ಯಾವ್ದು ಆ ಜಾಗ ಗೊತ್ತಾ.?

ಚೆನ್ನೈ: ಈ ಹೋಟೆಲ್‌ವೊಂದರಲ್ಲಿ ನೀವು ಇಡ್ಲಿ ತಿನ್ನಬೇಕಾದರೆ ಒಂದು ಇಡ್ಲಿಗ ಬರೋಬ್ಬರಿ 500ರೂಪಾಯಿಯನ್ನು ಪಾವತಿಸಬೇಕು. 30 ರಿಂದ 40 ರೂ ಸಿಗುವ ಇಡ್ಲಿಗೆ ಇಷ್ಟೊಂದು ಯಾಕೆ ಪಾವತಿಸಬೇಕು ಗೊತ್ತಾ.? ಇದು ಇರೋದಾದ್ರೂ ಎಲ್ಲಿ ಗೊತ್ತಾ.?

ಮನೆಯಲ್ಲಿ ತಿನ್ನುವ ಹೊರತಾಗಿ ಹೋಟೆಲ್‌ಗಳಲ್ಲಿ 30ರಿಂದ ಹಿಡಿದು ಹೆಚ್ಚೆಂದರೆ 50 ರೂಪಾಯಿಯ ಒಳಗಡೆ ಬಿಸಿಬಿಸಿಯಾದ ಇಡ್ಲಿಯನ್ನು ಸವಿಯಬಹುದು. ಆದರೆ ಚೆನ್ನೈನ ಹೋಟೆಲ್‌ ಒಂದರಲ್ಲಿ ಒಂದು ಪ್ಲೇಟ್‌ ಇಡ್ಲಿಗೆ ಬರೋಬ್ಬರಿ 500 ರೂಪಾಯಿಯನ್ನು ಪಾವತಿಸಬೇಕು.

ಈ ಇಡ್ಲಿ ಚೆನ್ನೈನ ಅಡ್ಯಾರ್‌ ಆನಂದ ಭವನ ಹೋಟೆಲ್‌ನಲ್ಲಿ ಲಭ್ಯವಿದೆ. ಈ ಇಡ್ಲಿ ದುಬಾರಿಯಾಗಲು ಕಾರಣ ಅದರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು. ಬಾದಾಮಿ, ಬೆರಿ ಹಣ್ಣುಗಳು, ಆಲಿವ್ ಎಣ್ಣೆ ಮತ್ತು ಇತರ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಲವಂಗ, ದಾಲ್ಚಿನ್ನಿ, ಮಶ್ರೂಮ್‌, ಬ್ರೆಜಿಲ್‌ ನಟ್‌, ಒಮೆಗಾ 3, ಅಗಸೇಬೀಜ, ಶುಂಠಿಪುಡಿ, ಅಶ್ವಗಂಧ, 24 ಗಂಟೆಗಳ ಕಾಲ ನೆನೆಸಿದ ಬಾದಾಮಿ, ವಾಲ್ನಟ್‌ ಪಿಸ್ತಾ, ಗೋಡಂಬಿ, ನೀಲಿ ಹಣ್ಣುಗಳು, ಕೇಸರಿ ಸೇರಿದಂತೆ ಇತ್ಯಾದಿ ಪೋಷಕಾಂಶಗಳಿಂದ ಕೂಡಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ.

ಮಧುಮೇಹಿಗಳು ಕೂಡ ಈ ಇಡ್ಲಿಯನ್ನು ಹಿಂಜರಿಕೆಯಿಲ್ಲದೇ ಸವಿಯಬಹುದು. ಇಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲದಲ್ಲಿಡಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಬಳಸುವ ಆಲಿವ್‌ ಎಣ್ಣೆಯು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉಪಯುಕ್ತವಾಗಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಬ್ಲೂಬೆರಿಗಳನ್ನು ಸಹ ಇದರಲ್ಲಿ ಬಳಸಲಾಗುತ್ತದೆ.

Tags:
error: Content is protected !!