ಬೆಂಗಳೂರು : ನೇಪಾಳದಲ್ಲೂ ಕೂಡ ಭಾರೀ ಮಳೆಯಾಗುತ್ತಿರುವ ಕಾರಣ ಬೆಟ್ಟ ಗುಡ್ಡ ಕುಸಿದು ಸಂಕಷ್ಟಕ್ಕೆ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ.
ಬೆಂಗಳೂರಿನಿಂದ ಎರಡು ದಿನದ ಹಿಂದೆ ನೇಪಾಳದ ಮುಕ್ತಿನಾಥ ದೇವಾಲಯಕ್ಕೆ ಸುಮಾರು ೫೦ ಮಂದಿ ಯಾತ್ರಾರ್ಥಿಗಳು ತೆರಳಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿದು ವಾಹನಗಳು ಪಲ್ಟಿಯಾಗಿದೆ. ಅಲ್ಲದೆ ನಡುರಸ್ತೆಯಲ್ಲಿಯೇ ಗುಡ್ಡ ಕುಸಿದಿರುವುದರಿಂದ ಸಂಚರಿಸಲು ಸಾಧ್ಯವಾಗದೆ ರಸ್ತೆ ಮಧ್ಯೆಯೇ ಯಾತ್ರಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.
ನೇಪಾಳದ ಪ್ರೋಕ್ರದಿಂದ ಮುಕ್ತಿನಾಥ ದೇವಾಲಯ ರಸ್ತೆಯಲ್ಲಿ ಯಾತ್ರಾರ್ಥಿಗಳು ಸಿಲುಕಿದ್ದು, ಆಕಡೆ ದೇವಾಲಯಕ್ಕೂ ಹೋಗಲಾರದೆ ಇತ್ತ ವಾಪಸ್ ಬರಲಾಗದೆ ರಸ್ತೆ ಮಧ್ಯೆ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.