Mysore
18
few clouds

Social Media

ಬುಧವಾರ, 28 ಜನವರಿ 2026
Light
Dark

ರಾಜ್ಯದಲ್ಲಿ 19 ಸಾವಿರ ಗಡಿ ದಾಟಿದ ಡೆಂಗ್ಯೂ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 337 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 19313ಕ್ಕೆ ಏರಿಕೆಯಾಗಿದೆ. 415 ಮಂದಿ ಡೆಂಗ್ಯೂನಿಂದ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ 224 ಮಂದಿ ಮನೆಯಲ್ಲಿ 113 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವರ್ಷದೊಳಗಿನ 10 ಮಕ್ಕಳು, 18 ವರ್ಷದೊಳಗಿನ 133 ಹಾಗೂ 18 ವರ್ಷ ಮೇಲ್ಪಟ್ಟ 194 ಮಂದಿಗೆ ಡೆಂಗ್ಯೂ ದೃಢವಾಗಿದೆ.

ಇದರಲ್ಲಿ ಮೈಸೂರು 23, ಹಾಸನ 18, ಮಂಡ್ಯ 12, ಬಿಬಿಎಂಪಿ 123, ತುಮಕೂರು 24, ಬಾಗಲಕೋಟೆಯಲ್ಲಿ 10 ಪ್ರಕರಣಗಳು ವರದಿಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಡೆಂಗ್ಯೂ ಪರೀಕ್ಷೆ ಕೈಗೊಂಡಿಲ್ಲ.

ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಲೇ ಇರುವುದರಿಂದ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮನೆಯ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳುವಂತೆ ಅಭಿಯಾನ ಶುರು ಮಾಡಲಾಗಿದ್ದು, ಹಳ್ಳಿಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದೆ.

Tags:
error: Content is protected !!