Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ರಾಜ್ಯದಲ್ಲಿ ನಿಲ್ಲದ ಡೆಂಗ್ಯೂ ಆರ್ಭಟ: ಆರೋಗ್ಯ ಇಲಾಖೆ ಜನಜಾಗೃತಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಆರೋಗ್ಯ ಇಲಾಖೆ ಜನಜಾಗೃತಿ ಮೂಡಿಸುತ್ತಿದೆ.

ಶಾಲಾ ಮಕ್ಕಳನ್ನೇ ಡೆಂಗ್ಯೂ ಬೆಂಬಿಡದೇ ಕಾಡುತ್ತಿದ್ದು, ಶಾಲೆಗಳಲ್ಲೇ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಇನ್ನು ಹಳ್ಳಿಗಳಲ್ಲೂ ಮನೆಯ ಸುತ್ತ ಸ್ವಚ್ಛತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಮಳೆಯಿಂದ ಸಣ್ಣ ಸಣ್ಣ ಗುಂಡಿಗಳಲ್ಲಿ ನೀರು ನಿಲ್ಲದಂತೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಯಾವುದೇ ವ್ಯಕ್ತಿಗೆ ಸಾಮಾನ್ಯ ರೋಗ ಲಕ್ಷಣಗಳಾದ ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿನೋವು, ವಿಶಿಷ್ಟ ಚರ್ಮದ ಗುಳ್ಳೆಗಳ ಅಥವಾ ದದ್ದುಗಳನ್ನು ಒಳಗೊಂಡಿರುತ್ತದೆ.

ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ಆಸ್ಪತ್ರೆಗೆ ತೆರಳಿ ಡೆಂಗ್ಯೂ ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಜನತೆಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಇನ್ನು ಮಕ್ಕಳಿಗೆ ಡೆಂಗ್ಯೂ ಅಟ್ಯಾಕ್‌ ಮಾಡುತ್ತಿದ್ದು, ಪೋಷಕರು ಕೂಡ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಬೇಕಾಗಿ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಮಕ್ಕಳನ್ನು ಹೊರಗಡೆ ಆಟವಾಡುವಾಗ ಮುಂಜಾಗ್ರತೆ ವಹಿಸಿ ಕಳುಹಿಸಬೇಕು. ಜೊತೆಗೆ ಗುಂಡಿಗಳ ಕಡೆ ಗಮನಹರಿಸಬೇಕು ಎಂದು ಖಡಕ್‌ ಎಚ್ಚರಿಕೆ ನೀಡಿದೆ.

Tags:
error: Content is protected !!