ನೆರೆಯ ಕೇರಳದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಜೆಎನ್ 1 ಉಲ್ಬಣಗೊಂಡಿರುವುದು ಇದೀಗ ಕರ್ನಾಟಕದಲ್ಲಿಯೂ ಸಹ ಆತಂಕವನ್ನು ಉಂಟುಮಾಡಿದೆ. ಈ ಸಂಬಂಧ ಇಂದು ( ಡಿಸೆಂಬರ್ 19 ) ಕರ್ನಾಟಕ ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಸುತ್ತೋಲೆಯೊಂದನ್ನು ಹೊರಡಿಸಿದೆ.
ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೊವಿಡ್ 19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸೂಚಿಸಲಾಗಿದೆ.
ಜಂಟಿ ನಿರ್ದೇಶಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಈ ಕೆಳಕಂಡ ಅಂಶಗಳ ಕುರಿತ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದೆ.
1. ಪಿಎಸ್‌ಎ ಪ್ಲಾಂಟ್‌ಗಳ ಕಾರ್ಯವೈಖರಿ ಬಗ್ಗೆ ವರದಿ ನೀಡುವುದು.
2. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್‌ಗಳ ಬಗ್ಗೆ ವರದಿ ನೀಡುವುದು.
3. ಮುಖ್ಯವಾಗಿ ಐಸಿಯು ಉಪಕರಣಗಳು ಹಾಗೂ ವೆಂಟಿಲೇಟರ್‌ಗಳನ್ನು ಸ್ವತಃ ಪರಿಶೀಲಿಸಿ ಕಾರ್ಯ ನಿರ್ವಹಣೆ ಬಗ್ಗೆ ವರದಿ ನೀಡುವುದು.
4. ಎಲ್ಲಾ ಆಕ್ಸಿಜನ್ ಸಿಲಿಂಡರ್‌ಗಳನ್ನು ತುಂಬಿಸುವ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವುದು.
5. ಆಕ್ಸಿಜನ್ ಕಾನ್ಸಂಟ್ರೇಟರ್ ಬಗ್ಗೆ ತಪಾಸಣೆ ಕೈಗೊಂಡು ವರದಿ ನೀಡುವುದು.
6. ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಬಗ್ಗೆ ತಪಾಸಣೆ ಕೈಗೊಂಡು ವರದಿ ನೀಡುವುದು.
7. ಐಸಿಯುನಲ್ಲಿ ಇರುವ ಎಲ್ಲಾ ಯಂತ್ರೋಪಕರಣಗಳ ಬಗ್ಗೆ ತಪಾಸಣೆ ಮತ್ತು ಔಷಧಿಗಳ ಲಭ್ಯತೆ ಬಗ್ಗೆ ಕ್ರಮ ಕೈಗೊಳ್ಳುವುದು.





