Mysore
67
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮಗನನ್ನೇ ಗೆಲ್ಲಿಸಲಾಗದ ಎಚ್‌ಡಿಕೆ ತಾವು ಗೆಲ್ಲುತ್ತಾರೆಯೇ?: ಸಿಎಂ ಪ್ರಶ್ನೆ

ಮೈಸೂರು: ಎಚ್‌.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತಮ್ಮ ಮಗನನ್ನು ಗೆಲ್ಲಿಸಲಾಗಲಿಲ್ಲ. ಈಗ ತಾವು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು,  ಗೆಲ್ಲುತ್ತಾರೆಯೇ ಎಂದು ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

2019 ಹಿಂದಿನ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ ಕುಮಾರಸ್ವಾಮಿ ಅವರು ಮಂಡ್ಯ ಕಣದಲ್ಲಿ ತಮ್ಮ ಮಗ ನಿಖಿಲ್‌ ಅವರನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈಗ ಇವರು ಗೆಲ್ಲುತ್ತಾರೆಯೇ? ಹಾಸನದವರಾದ ಕುಮಾರಸ್ವಾಮಿ ಅವರಿಗೆ ಮಂಡ್ಯ ಹೇಗೆ ಕರ್ಮಭೂಮಿ ಅಗುತ್ತದೆ. ಅವರು ಎಷ್ಟೇ ಭಾವನಾತ್ಮಕವಾಗಿ ಮಾತನಾಡಿದರು ಸಹಾ ಮಂಡ್ಯದಲ್ಲಿ ಗೆಲ್ಲಲ್ಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸ್ಟಾರ್‌ ಚಂದ್ರು ಇಲ್ಲಿನ ನಾಗಮಂಗಲದವರು ಮತ್ತು ಮಂಡ್ಯ ಕ್ಷೇತ್ರಕ್ಕೆ ಚಿರಪರಿಚಿತರಾದವರು. ಇವರು ಯಾವುದೇ ದೃಷ್ಠಿಯಿಂದಲೂ ವಿಕ್‌ ಕ್ಯಾಡಿಂಡೇಟ್‌ ಅಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags: