ಬೆಂಗಳೂರು : ಭಾರತ ದೇಶವೇ ಎದುರು ನೋಡುತ್ತಿರುವ, ಸುಮಾರು ೫ ಶತಮಾನಗಳ ಬಹುಸಂಖ್ಯಾತ ಹಿಂದುಗಳ ಕನಸಾಗಿದ್ದ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಈ ಕಾರ್ಯದಲ್ಲಿ ಭಾಗಿಯಾಗುವಂತೆ ದೇಶ-ವಿದೇಶಗಳ ಅನೇಕ ಮಹಾನ್ ನಾಯಕರು ಹಾಗೂ ಗಣ್ಯವಕ್ತಿಗಳಿಗೆ ಆಹ್ವಾನ ನೀಡಲಾಗಿದೆ.
ಕರ್ನಾಟಕ ರಾಜ್ಯದ ಮಣ್ಣಿನ ಮಗ ಮಾಜಿ ಪ್ರಧಾನಿ ಅವರಿಗೂ ಈ ದಿವ್ಯ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.
ಈ ಹಿನ್ನಲೆ ಇಂದು ಹೆಚ್.ಡಿ.ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಯೋಧ್ಯೆಗೆ ಪ್ರವಾಸ ಬೆಳೆಸಿದ್ದಾರೆ.
ಇನ್ನು ನಾಳೆ ಜ.೨೨ರಂದು ನಿಖಿಲ್ ಕುಮಾರಸ್ವಾಮಿ ಅವರ ಜನ್ಮದಿನವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳನ್ನು ಕುರಿತು ಮನವಿ ಪತ್ರ ಒಂದನ್ನು ಬರೆದಿದ್ದಾರೆ.
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಜನವರಿ 22, ನನ್ನ ಹುಟ್ಟುಹಬ್ಬದ ದಿನ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ನಾನು ಭಾಗಿಯಾಗಬೇಕಿದೆ. ನೀವೆಲ್ಲರೂ ನೀವಿದ್ದ ಕಡೆಯಿಂದಲೇ ನನ್ನ ಹುಟ್ಟುಹಬ್ಬಕ್ಕೆ ಹರಿಸಿದರೆ ಅದೇ ನನಗೆ ಸಂತೋಷ” ಎಂದು ನಿಖಿಲ್ಕುಮಾರಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.





