ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ, ಲೈಗಿಂಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿರುವ ಪ್ರಜ್ವಲ್ ರೇವಣ್ಣರನ್ನ ನೋಡಲು ಮಾಜಿ ಸಚಿವ ಎಚ್.ಡಿ ರೇವಣ್ಣ ಮೊದಲ ಬಾರಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಮಂಗಳವಾರಷ್ಟೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಾನು ಸದ್ಯಕ್ಕೆ ಪ್ರಜ್ವಲ್ ನೋಡೊಕ್ಕೆ ಜೈಲಿಗೆ ಹೋಗಲ್ಲ. ಹೋದರೆ ರೇವಣ್ಣ ಏನೋ ಹೇಳಿ ಕೊಟ್ಟರು ಅಂತ ಹೇಳ್ತಿರಾ. ಅದಕ್ಕೆ ನಾನು ಜೈಲಿಗೆ ಹೋಗಲ್ಲ ಅಂತಾ ಹೇಳಿಕೆ ನೀಡಿದ್ದರು. ಆದರೆ ಇಂದು ಮಗನನ್ನ ನೋಡಲು ಜೈಲಿಗೆ ಬಂದಿದ್ದಾರೆ. ಸೋಮವಾರ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಮಗನನ್ನ ನೋಡಲು ಜೈಲಿಗೆ ಹೀಗಿದ್ದರು. ಇಂದು ತಂದೆ ಎಚ್ ಡಿ ರೇವಣ್ಣ ಆಗಮಿಸಿದ್ದಾರೆ.