ಬೆಂಗಳೂರು: ಹಾಸನ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತು.
ಎಚ್‌ಡಿಕೆ ನೇತೃತ್ವದ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರನ್ನು ಭೇಟಿಯಾಗಿ ಪೆನ್‌ಡ್ರೈವ್ ಪ್ರಕರಣದಲ್ಲಿ ನ್ಯಾಯ ಕೊಡಿಸಿಕೊಡುವಂತೆ ಮನವಿ ಮಾಡಿತು.
ನಂತರ ಮಾಧ್ಯಮಗೋಷ್ಠೀ ನಡೆಸಿ ಮಾತನಾಡಿದ ಎಚ್‌ಡಿಕೆ, ಎಚ್‌ಡಿ ರೇವಣ್ಣ ವಿಚಾರದಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಯೂ ಕೂಡಾ ಈವರೆಗೆ ಯಾಕೆ ಯಾವುದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲ್ಲ ಎಂದು ಕಿಡಿಕಾರಿದರು.
ಪ್ರಜ್ವಲ್ ಹಾಗೂ ರೇವಣ್ಣ ಪ್ರಕರಣ ದಾರಿ ತಪ್ಪುತ್ತಿದೆ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಅದು ಯಾರೇ ಆಗುದ್ದರೂ ಸಹಾ. ಇವರ ತನಿಖೆ ಮಾಡುತ್ತಿರುವುದನ್ನು ನೋಡಿದರೇ ಇವರ ಉದ್ದೇಶ ತಿಳಿಯುತ್ತದೆ. ತನಿಖೆ ಆರಂಭವಾದಾಗಿನಿಂದಲೂ ಮಂದಗತಿಯಿಂದಲೇ ತನಿಖೆ ಸಾಗುತ್ತಿದೆ. ಹೀಗಾಗಿ ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇವೆ ಎಂದರು.
ಕೃಷ್ಣ ಭೈರೇಗೌಡರ ಹೇಳಿಕೆಯನ್ನು ಪ್ರಸ್ತಾಪಿಸಿ, ಕೃಷ್ಣೇ ಭೈರೇಗೌಡರು ರಾಜ್ಯದಲ್ಲಿ ಮಾನಹರಣ ಶೀಲಾಹರಣ ಪದಗಳನ್ನು ಬಳಿಸಿದ್ದೀರಿ. ನೂರಾರು ಮಹಿಳೆಯರ ಮಾನ ಹಾನಿಯಾಗಿದೆ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ. ಎಚ್‌ಡಿಕೆ ಪೆನ್‌ಡ್ರೈವ್ ಜೇಬಿನಲ್ಲಿದೆ ಎಂದು ಹೇಳುತ್ತಾರೆ. ನಾನು ಇಂತಹ ಪೆನ್‌ಡ್ರೈವ್ ಬಿಡುತ್ತೇನೆ. ಇದರ ಮೇಲೆ ಕ್ರಮ ಜರುಗಿಸುವದಾದರೇ ಈ ಪೆನ್ ಡ್ರೈವ್ ಕೊಡುತ್ತೇನೆ ಎಂದು ನಿಮ್ಮ ಸಿಎಂ ಹಾಗೂ ಸ್ಪೀಕರ್ ಅವರಿಗೆ ಹೇಳಿದೆ. ವರ್ಗಾವಣೆ ದಂಧೆ ಸೇರಿದಂತೆ ಸಿಎಸ್‌ಆರ್ ಫಂಡ್ ಎಲ್ಲಾ ಡಾಕ್ಯೂಮೆಂಟ್ ಪೆನ್‌ಡ್ರೈವ್ ಇರುವುದು ನನ್ನ ಬಳಿ, ನಿಮ್ಮ ಬಳಿಯಿರುವ ಅಶ್ಲೀಲ ಪೆನ್‌ಡ್ರೈವ್ ಅಲ್ಲ ಎಂದಿದ್ದಾರೆ.
ಇನ್ನು ಡಿಕೆಶಿ ಅವರನ್ನು ಎಚ್‌ಡಿ ಕುಮಾರಸ್ವಾಮಿ ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರ ಕಥೆಗೆ ನಾನೇ ನಾಯಕನಾಗಬೇಕು. ಅವರ ಕಥೆಗೆ ನನ್ನನ್ನು ನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ. ಅದು ನನಗೆ ಸಂತೋಷ ನೀಡಿದೆ ಎಂದು ಎಚ್ಡಿಕೆ ಕುಹಕವಾಡಿದರು.