Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಇವಿಎಂ ಹ್ಯಾಕ್‌ ಬಗ್ಗೆ ಸಾಕ್ಷಿ ಜೊತೆ ಮಾತನಾಡಲಿ: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ತುಮಕೂರು: ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕ್‌ ಮಾಡಬಹುದು ಎಂದು ಟೆಸ್ಲಾ ಓನರ್‌ ಎಲಾನ್‌ ಮಸ್ಕ್‌ ಹೇಳಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡಾ ಬೆಂಬಲಿಸಿದ್ದರು.

ಈ ವಿಚಾರವಾಗಿ ಭಾರತೀಯ ಚುನಾವಣಾ ಆಯೋಗವು ಎಲಾನ್‌ ಮಸ್ಕ್‌ಗೆ ಅದನ್ನು ನಿರೂಪಿಸಿ ಎಂದು ಬಹಿರಂಗ ಸವಾಲು ಹಾಕಿದ್ದರು. ಇದೆಲ್ಲದರ ನಡುವೆ ಕೇಂದ್ರ ಉಕ್ಕು ಹಾಗೂ ಬೃಹತ್‌ ಖಾತೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರಸ್‌ ನಡೆಯನ್ನು ಖಂಡಿಸಿದ್ದಾರೆ.

ನಗರದಲ್ಲಿಂದು (ಜೂನ್‌.17) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇವಿಎಂ ಅನ್ನು ಹ್ಯಾಕ್‌ ಮಾಡಬಹುದು ಎಂದು ಹೇಳುವವರು ಮೊದಲು ಸಾಕ್ಷಿ ಕೊಡಲಿ, ಆ ಬಳಿಕ ಸತ್ಯ ಏನೆಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ತಿವಿದಿದ್ದಾರೆ.

ಹ್ಯಾಕ್‌ ಮಾಡಿ ಕಾಂಗ್ರೆಸ್‌ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದಿತೇ ಎಂದು ಸಹಾ ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.

ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹಲವಾರು ವರ್ಷಗಳಿಂದಲೂ ಹೇಳಿಕೊಂಡು ಬರುತ್ತಲೇ ಇದ್ದಾರೆ. ಆದರೆ ಈವರೆಗೆ ಯಾರೂ ನಿರೂಪಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡಾ ಚರ್ಚೆ ಮಾಡಿದ್ದು, ಇವುಗಳೆಲ್ಲಾ ಊಹಾಪೋಗಳು ಎಂದು ಚುನಾವಣಾ ಆಯೋಗವೇ ಹೇಳಿದೆ ಎಂದು ಟಾಂಗ್‌ ಕೊಟ್ಟರು.

ಇನ್ನು ರಾಜ್ಯದಲ್ಲಿ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಎಚ್‌ಡಿಕೆ ಅವರ ಅಧಿಕಾರಾವಧಿಯಲ್ಲಿ ಏರಿಕೆ ಮಾಡಿದ್ದರು ಎಂದು ದೂರಿರುವ ಸಂಬಂಧ, ನನ್ನ ಅಧಿಕಾರವಧಿಯಲ್ಲಿ ಬೆಲೆ ಏರಿಕೆ ಮಾಡಿದ್ದರೇ ಅದರ ದಾಖಲೆಗಳನ್ನು ಕೊಡಲಿ ನಾನು ಸಿಎಂ ಆಗಿದ್ದ ಸಮಯದಲ್ಲಿ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ ಸಂದರ್ಭದಲ್ಲಿ ಅಗತ್ಯ ಹಣ ನಿಯೋಜಿಸಲು ಬೆಲೆ ಏರಿಕೆ ಮಾಡಲು ಚಿಂತಿಸಿದ್ದೆ. ಆದರೆ, ಸಿದ್ದರಾಮಯ್ಯ ಅವರೇ ಅವಕಾಶ ನೀಡಲಿಲ್ಲ ಈಗ ನೋಡಿದರೆ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳಲು ಒಂದು ಇತಿಮಿತಿ ಬೇಕು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು.

Tags: