Mysore
29
scattered clouds

Social Media

ಗುರುವಾರ, 02 ಏಪ್ರಿಲ 2026
Light
Dark

ಸೂರಜ್‌ ಲೈಂಗಿಕ ದೌರ್ಜನ್ಯ ಆರೋಪ; ಮಾಧ್ಯಮದವರ ಪ್ರಶ್ನೆಗೆ ಹೆಚ್‌ಡಿಕೆ ಗರಂ

ಬೆಂಗಳೂರು: ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಗಿಂಕ ದೌರ್ಜನ್ಯ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರ ಪ್ರಶ್ನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಂ ಆದ ಹೆಚ್.ಡಿ.ಕೆ, ಅದೆಲ್ಲಾ ನನ್ನತ್ರ ಚರ್ಚೆ ಬೇಡ ರಾಜ್ಯಕ್ಕೆ ಸಂಬಂಧಪಟ್ಟದ್ದು ಮಾತ್ರ ಚರ್ಚೆ ಮಾಡಿ ಅದರ ಅವಶ್ಯಕತೆ ನನಗಿಲ್ಲ, ಕಾನೂನಿದೆ ಕಾನೂನು ನೋಡಿಕೊಳ್ಳುತ್ತೆ. ಈ ರೀತಿ ದೂರುಗಳು ಯಾಕೆ ಬರುತ್ತಿದೆ ಅದೆಲ್ಲಾ ನಂಗೆ ಗೊತ್ತಿಲ್ಲ ಎಂದರು.

ಬಳಿಕ ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ಇಂಗಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆಯಾದರೂ ನಿಲ್ಲಲಿ ಅಥವಾ ಇನ್ನೊಂದಷ್ಟು ನಾಲ್ಕು ಜನ ಕರೆದುಕೊಂಡು ಬೇಕಾದರೂ ಬಂದು ನಿಲ್ಲಿಸಲಿ ಅದಕ್ಕೆ ದೊಡ್ಡ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Tags:
error: Content is protected !!