ಬೆಂಗಳೂರು: ರೈತರ ಹೆಸರನ್ನು ಬಳಸಿಕೊಂಡು ರಾಜ್ಯ ಸರ್ಕಾರ ಕೆಆರ್‌ಎಸ್ ಡ್ಯಾಂ ನಿಂದ ನೀರು ಹರಿಯಬಿಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ನೀರನ್ನು ಈಗಾಗಲೇ ಹರಿಯಬಿಟ್ಟು ಕೇವಲ ಕಾಟಾಚಾರಕ್ಕಾಗಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಅವರು ನೀರು ಬಿಟ್ಟಿದ್ದಕ್ಕಾಗಿ ಅವರಿಗೆ ಶಹಬ್ಬಾಸ್‌ಗಿರಿ ಹೇಳಲು ಹೋಗಬೇಕಿತ್ತಾ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರಿನಲ್ಲಿಂದು ಸರ್ವಪಕ್ಷಗಳ ಸಭೆಗೆ ಗೈರಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ನೀರು ತಮಿಳುನಾಡಿಗೆ ಹರಿಸಲು ಸಿಡಬ್ಲ್ಯೂಆರ್‌ಸಿ ಶಿಫಾರಸ್ಸು ಪ್ರಶ್ನಿಸಿ ಕರೆದಿದ್ದ ಸಭೆ ಬಗ್ಗೆ ಮಾತನಾಡಿ, ಯಾವ ವಿಚಾರಕ್ಕಾಗಿ ಸಭೆ ಕರೆದಿದ್ದರು. ಹೀಗಾಗಲೇ ತಮಿಳುನಾಡಿಗೆ ಕಬಿನಿಯಿಂದ ನೀರು ಹರಿಸಿದ್ದಾರೆ. ಸಭೆಯಲ್ಲಿ ನೀಡುವ ಗೋಡಂಬಿ, ಬಾದಾಮಿ ತಿನ್ನಲು ಹೋಗಬೇಕಿತ್ತಾ ಎಂದು ಬೇಸರ ವ್ಯಕ್ತಪಡಿಸಿದರು.