ಬೆಂಗಳೂರು: ವನ್ಯಜೀವಿ ಮತ್ತು ಕಳ್ಳಬೇಟೆಗಾರರ ದಾಳಿಯಿಂದ ಅಪಾಯಕ್ಕೀಡಾಗಿವ ಅರಣ್ಯ ಸಿಬ್ಬಂದಿಗಳಿಗೆ ಅಪಾಯ ಭತ್ಯೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇಂದು (ಫೆ.21) ಅರಣ್ಯ ಭವನದಲ್ಲಿ ಅರಣ್ಯ ಪಡೆಯ ಮುಖ್ಯಸ್ಥೆ ಮೀನಾಕ್ಷಿ ನೇಗಿ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಅರಣ್ಯ ಸಿಬ್ಬಂದಿಯ ಬಹು ಬೇಡಿಕೆಗಳಲ್ಲಿ ಒಂದಾಗಿರುವ ಪೊಲೀಸ್ ಕ್ಯಾಂಟಿನ್ ಮಾದರಿಯ ಕ್ಯಾಂಟೀನ್ ವ್ಯವಸ್ಥೆ ಜಾರಿಗೊಳಿಸಲು ಮುಕ್ಯಮಂತ್ರಿಯವರ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.
ಅರಣ್ಯ ಮತ್ತು ಪರಿಸರ ಇಲಾಖೆ ಅತ್ಯಂತ ಮಹತ್ವದ ಇಲಾಖೆ. ಇಡೀ ವಿಶ್ವದ ಜಾಗತಿಕ ತಾಪಮಾನ, ಹವಮಾನ ಬದಲಾವಣೆಯಂತಹ ಸವಾಲುಗಳಿಗೆ ಪರಿಹಾರ ಇರುವುದು ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ಮಾತ್ರ ಎಂದರು.
ನಾನು ಅರಣ್ಯ ಇಲಾಖೆ ಸಚಿವನಾದ ಮೇಲೆ ಈ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದೇನೆ. ಆನ್‌ಲೈನ್,ಎಫ್‌ಐಆರ್ ವ್ಯವಸ್ಥೆ, ಕೌನ್ಸೆಲಿಂಗ್ ಮೂಲಕ ಟಿಕೆಟ್ ಮುಂಗಡ ಕಾಯ್ದಿರಿಸುವ ವ್ಯವಸ್ಥೆ, ಅರಣ್ಯ ಒತ್ತುವರಿ ತೆರವು ಮೊದಲಾದ ಹಲವು ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತಿರರು ಇದ್ದರು.