Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಅರ್ಚಕರಿಗೆ ಹೂ ಪ್ರಸಾದ ಕೊಟ್ಟ ಹಾಸನಾಂಬೆ

ಹಾಸನ : ಸುಪ್ರಸಿದ್ದ ಹಾಸನಾಂಬ ದೇವಾಲಯದಲ್ಲಿ ದೇವಿಯ ದರ್ಶನೋತ್ಸವ ನಡೆಯುತ್ತಿದೆ. ಹಾಸನಾಂಬೆ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದು ಬರುತ್ತಿದೆ. ಈ ನಡುವೆ ದೇವಾಲಯದ ಅರ್ಚಕರಿಗೆ ದೇವಿ ಹೂ ಪ್ರಸಾದ ನೀಡಿ ಅಚ್ಚರಿ ಮೂಡಿಸಿದ್ದಾಳೆ.

ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನದ ಅಧಿದೇವತೆ ಹಾಸನಾಂಬೆ ಒಂದಿಲ್ಲೊಂದು ಪವಾಡಗಳಿಂದ ಭಕ್ತರನ್ನು ಅಚ್ಚರಿಗೋಳಪಡಿಸುತ್ತಲೇ ಇದ್ದಾಳೆ. ಅಂತೆಯೇ ಈಗಲೂ ಕೂಡ,ದೇವಿಯ ಬಳಿ ಬೇಡಿಕೆ ಇಟ್ಟು ಧ್ಯಾನಕ್ಕೆ ಕುಳಿತಿದ್ದ ಅರ್ಚಕರಿಗೆ ಬಲಗಡೆಯಿಂದ ಹೂ ಪ್ರಸಾದ ಕೊಟ್ಟು ಅಚ್ಚರಿ ಮೂಡಿಸಿದ್ದಾಳೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾಸನಾಂಬ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ದಿನದ 24 ಗಂಟೆಗಳ ಕಾಲವೂ ಕೂಡ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ. ಈ ಬಾರಿ ನ.2ರಂದು ದೇವಾಲಯದ ಬಾಗಿಲನ್ನು ತೆರೆಯಲಾಗಿದ್ದು,ನ.14 ರವರೆಗೂ ತಾಯಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ನ. 15 ರಂದು ವಿಧಿ ವಿಧಾನವನ್ನು ಪೂರೈಸಿ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ