Mysore
32
few clouds

Social Media

ಬುಧವಾರ, 01 ಏಪ್ರಿಲ 2026
Light
Dark

ಹಾಸನ ಪೆನ್‌ಡ್ರೈವ್‌ ಪ್ರಕರಣ: ಶಾಸಕ ಎ.ಮಂಜು ವಿಚಾರಣೆ

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣದಲ್ಲಿ ಅರಕಲಗೂಡು ಶಾಸಕ ಎ. ಮಂಜು ಅವರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣ ಆರೋಪಿ ನವೀನ್‌ಗೌಡ, ಪೆನ್‌ಡ್ರೈವ್‌ನನ್ನು ಶಾಸಕ ಎ.ಮಂಜು ಅವರಿಗೆ ನೀಡಿದ್ದೆ ಎಂದು ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆ ಹಾಸನ ಸೆನ್‌ ಠಾಣೆಯ ಪೊಲೀಸರು ಮಂಜು ಅವರನ್ನು ವಿಚಾರಣೆ ನಡೆಸಿದ್ದಾರೆ.

ತನಿಖಾ ಅಧಿಕಾರಿಯಾಗಿರುವ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಕೆ ತಿಮ್ಮಯ್ಯ ಅವರು ಶಾಸಕ ಮಂಜು ಅವರನ್ನು ಒಂದು ಗಂಟೆ ಕಾಲ ವಿಚಾರಣೆ ನಡೆಸಿದರು.

ಎಸ್‌ಐಟಿ ಅಧಿಕಾರಿಗಳು ಈಗಾಗಲೇ ನವೀನ್‌ಗೌಡ ಅವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆತ ನೀಡಿರುವ ಮಾಹಿತಿ ಆಧರಿಸಿ ಶಾಸಕ ಮಂಜು ಅವರಿಗ ಎಸ್‌ಐಟಿ ನೋಟಿಸ್‌ ನೀಡಿತ್ತು.

ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎ.ಮಂಜು, ನವೀನ್‌ಗೌಡ ವಿರುದ್ಧ ನಾನೇ ದೂರು ನೀಡಿದ್ದೆ. ಅದರ ಸಂಬಂಧ ಎಸ್‌ಐಟಿ ತಂಡಕ್ಕೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

 

Tags:
error: Content is protected !!