ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣದ ಕಾವು ಇರುವಾಗಲೇ ಇದೀಗ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿ ಗ್ರಾಮದಲ್ಲಿಯೂ ಅಂತಹದ್ದೇ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ಭಗವಾ ಧ್ವಜವನ್ನು ತೆರವುಗೊಳಿಸಲಾಗಿದ್ದು, ಹಿಂದೂಪರ ಸಂಘಟನೆಗಳು ʼಚಲೋ ಎಂಕೆ ಹುಬ್ಬಳ್ಳಿʼ ಕೈಗೊಂಡಿವೆ. ಬಿಜೆಪಿ ನಾಯಕರು, ಹಿಂದೂಪರ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಭಗವಾ ಧ್ವಜ ಕಟ್ಟೆ ನಿರ್ಮಿಸಲು ಸಹ ಅಭಿಯಾನ ಕೈಗೊಳ್ಳಲೂ ಸಹ ಮುಂದಾಗಿದ್ದಾರೆ. ಗ್ರಾಮದಲ್ಲಿರುವ ದೊಡ್ಡ ಹನುಮಾನ್ ಮಂದಿರದ ಬಳಿ ಭಗವಾ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ.