ಬೆಂಗಳೂರು: ರಾಮನಗರ ಜಿಲ್ಲೆ ಹೆಸರು ಬದಲಾಯಿಸಲು ಹೊರಟರೆ ತಕರಾರು ತೆಗೆಯುತ್ತಾರೆ ಎನ್ನುತ್ತಾರೆ. ರಾಮನಗರ ಕ್ಷೇತ್ರ ಅಭಿವೃದ್ಧಿ ಮಾಡಿದ್ದೇ ನಾನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಅವರು ರಾಮನಗರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಅವರು ರಾಮನಗರ ಜಿಲ್ಲೆಯ ಹೆಸರು ಬದಲಾಯಿಸಲು ಹೊರಟರೆ ತಕರಾರು ಮಾಡುತ್ತಾರೆಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಆ ಕ್ಷೇತ್ರವನ್ನು ಅಭಿವೃದ್ಧಿ ಪಡಸಿದ್ದು ನಾನು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ರಾಮನಗರದಲ್ಲಿ ನಾನು ಕಷ್ಟಪಟ್ಟು 45 ಎಕರೆ ಜಮೀನು ಖರೀದಿ ಮಾಡಿದ್ದೇನೆ. ಆದರೆ ಶನಿವಾರರ ನೋಟಿಸ್ ನೀಡದೆ ದಾಳಿ ಮಾಡಲು ಬಂದಿದ್ದರು. ನನ್ನ ಜಮೀನು ಸರ್ವೇ ಮಾಡಲು ಬಯಲ ಬಯಸಿದರೆ ನೋಟಿಸ್ ನೀಡಿದ ಬಳಿಕ ಬರಲಿ. ಇಲ್ಲವಾದರೆ ತನಿಖೆ ನಡೆಸಲು ಎಸ್‌ಐಟಿ ತಂಡ ರಚಿಸಲಿ. ಅದನ್ನು ಬಿಟ್ಟು ಹೇಳದೆ ಕೇಳದೆ ದಾಳಿ ಮಾಡಿದರೆ ಹೇಗೆ. ನಾನೇದರೂ ಅಕ್ರಮವಾಗಿ ಭೂಮಿ ಖರರೀದಿಸದ್ದರೆ ನನ್ನಿಂದ ಭೂಮಿಯನ್ನು ಹಿಂಪಡೆಯಲಿ ಎಂದು ತಿರುಗೇಟು ನೀಡಿದ್ದಾರೆ.





