Mysore
18
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಗುಂಡಿ ಜಟಾಪಟಿ : ಡಿನ್ನರ್‌ ಮೀಟಿಂಗ್‌ ಬಳಿಕ ಡಿಕೆಶಿಯನ್ನು ಹಾಡಿ ಹೊಗಳಿದ ಉದ್ಯಮಿಗಳು

DCM DK Shivakumar

ಬೆಂಗಳೂರು : ಬೆಂಗಳೂರಿನ ಗುಂಡಿ ಸಮಸ್ಯೆ, ಕಸದ ಸಮಸ್ಯೆ, ಮೂಲಭೂತ ಸಮಸ್ಯೆಗಳ ವಿರುದ್ಧ ಉದ್ಯಮಿಗಳು ಸಿಡಿದೆದಿದ್ದರು. ಸರ್ಕಾರದ ವಿರುದ್ಧ ಖಾರವಾಗಿ ಸಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಟೀಕೆ ಮಾಡಿದ್ದರು. ಕೆಲ ದಿನ ಸರ್ಕಾರ ವರ್ಸಸ್ ಉದ್ಯಮಿಗಳ ನಡುವೆ ಟ್ವೀಟ್ ವಾರ್, ಟಾಕ್‌ವಾರ್ ನಡೆದಿತ್ತು. ಆದರೆ ಈಗ ಬೆಂಗಳೂರಿನ ಗುಂಡಿ ಸಮಸ್ಯೆ ಬಗ್ಗೆ ಟೀಕಿಸಿದ್ದ ಉದ್ಯಮಿಗಳ ಜೊತೆಯೇ ಉಪಮುಖ್ಯಮಂತ್ರಿ ಡಿಕೆಶಿ ಡಿನ್ನರ್ ಮೀಟಿಂಗ್ ಮಾಡಿದ್ದಾರೆ.

ಬಯೋಕಾನ್ ಮುಖ್ಯಸ್ಥೆ, ಉದ್ಯಮಿ ಕಿರಣ್ ಮಜುಂದಾರ್ ಶಾ ನಿವಾಸದಲ್ಲಿ ಶನಿವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಕಿರಣ್ ಮಜುಂದರ್ ಶಾ, ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ಹಲವು ಉದ್ಯಮಿಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸಹ ಡಿನ್ನರ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಡಿನ್ನರ್ ಮೀಟಿಂಗ್ ವೇಳೆ ಗುಂಡಿಗಳ ದುರಸ್ತಿ, ಹೊರ ವರ್ತುಲ ರಸ್ತೆಯ ಅಭಿವೃದ್ಧಿ, ನಗರಾದ್ಯಂತ ಸ್ವಚ್ಛತಾ ಅಭಿಯಾನ, ಓಆರ್‌ಆರ್ ಉದ್ದಕ್ಕೂ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಡಿಸಿಎಂ ಡಿಕೆಶಿಗೆ ಉದ್ಯಮಿಗಳು ಮನವಿ ಮಾಡಿದ್ದಾರೆ.

ಇದನ್ನು ಓದಿ: ಯತೀಂದ್ರ ಹೇಳಿದ್ದು ಅಹಿಂದ ನಾಯಕತ್ವದ ಬಗ್ಗೆ : ಸತೀಶ ಜಾರಕಿಹೊಳಿ ಸ್ಪಷ್ಟನೆ

ಉದ್ಯಮಿಗಳೊಂದಿನ ಡಿನ್ನರ್ ಮೀಟಿಂಗ್ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಉದ್ಯಮಿಗಳ ಜೊತೆ ಡಿನ್ನರ್ ಮಿಟಿಂಗ್ ಮಾಡಿದ್ದೀನಿ. ಬೆಂಗಳೂರಿನ ಹಲವು ಸಮಸ್ಯೆಗಳಿಗೆ ಸಲಹೆ ನೀಡಿದ್ದಾರೆ. ಉದ್ಯಮಿಗಳ ಸಲಹೆಯನ್ನ ನಾವು ಸ್ವೀಕರಿಸುತ್ತೇವೆ. ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುವಾಗ ದೂರದೃಷ್ಟಿ ಇರುತ್ತದೆ. ನಮಗೆ ಸಲಹೆ ಕೊಡಿ ಆದ್ರೆ ನಮ್ಮನ್ನು ಹರ್ಟ್ ಮಾಡುವಂತೆ ಮಾಡಬೇಡಿ ಅಂತಾ ಹೇಳಿದ್ದೇನೆ ಎಂದರು.

ಡಿಕೆಶಿ ನಡಿಗೆ ಕಾರ್ಯಕ್ರಮ ಮೆಚ್ಚಿ ಪೋಸ್ಟ್
ಇನ್ನು ಶನಿವಾರ ರಾತ್ರಿ ಡಿನ್ನರ್ ಮೀಟಿಂಗ್ ಮೂಲಕ ಉದ್ಯಮಿಗಳನ್ನು ಡಿಕೆ ಶಿವಕುಮಾರ್ ವಿಶ್ವಾಸಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಗಳನ್ನ ಉದ್ಯಮಿಗಳು ಶ್ಲಾಘಿಸಿದ್ದಾರೆ. ಡಿಕೆಶಿ ನಾಗರಿಕರೊಂದಿಗೆ ನಡಿಗೆ ಕಾರ್ಯಕ್ರಮವನ್ನ ಉದ್ಯಮಿ ಮೋಹನ್ ದಾಸ್ ಪೈ ಹೊಗಳಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿಗಾಗಿ ಅದ್ಭುತ ಕಾರ್ಯಕ್ರಮ ಮಾಡುತ್ತಿದ್ದೀರಿ. ಈ ಕಾರ್ಯಕ್ರಮದ ಮೂಲಕ ಜನರನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸುವ ದೊಡ್ಡ ಕೆಲಸ ಮಾಡುತ್ತಿದ್ದೀರಿ. ಮೂರು ತಿಂಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅನೇಕ ಉತ್ತಮ ನಿರ್ಧಾರ ಮಾಡಿದ್ದೀರಿ. ಜಿಬಿಎ ರಚಿಸಿ ಭಾರತದ ದೊಡ್ಡ ನಗರಕ್ಕೆ ಸುಧಾರಣೆ ಮಾಡುತ್ತಿದ್ದೀರಿ. ನೀವು ಎಲ್ಲ ಕಾರ್ಯಗಳನ್ನ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಡಿಕೆ ಬೆಂಗಳೂರು ನಡಿಗೆ ಕಾರ್ಯಕ್ರಮದ ಕುರಿತ ಪೋಸ್ಟ್ ಟ್ಯಾಗ್ ಮಾಡಿ ಉದ್ಯಮಿ ಮೋಹನ್ ದಾಸ್ ಪೈ ಹೊಗಳಿದ್ದಾರೆ.

Tags:
error: Content is protected !!