ಬೆಂಗಳೂರು : ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬಹುತೇಕ ಜಿಲ್ಲೆಯ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣ ಸೋಮವಾರ ಸಂಜೆ ಖಾತೆಗೆ ಜಮೆಯಾಗಿದೆ.
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಬಹುತೇಕ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ.
ಯೋಜನೆ ಜಾರಿಯಾದಂದಿನಿಂದ 17 ತಿಂಗಳ(2024 ಡಿಸೆಂಬರ್ ರವರೆಗೆ )ಹಣ ಜಮೆಯಾಗಿದೆ. ಈ ವರ್ಷದ ಜನವರಿ ಫೆಬ್ರವರಿ ತಿಂಗಳ ಹಣ ಬಾಕಿಯಿತ್ತು. ಸದ್ಯ ಜನವರಿ ತಿಂಗಳ ಜಮೆಯಾಗಿದ್ದು, ಶೀಘ್ರದಲ್ಲೇ ಫೆಬ್ರವರಿ ತಿಂಗಳ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಿಳಿಸಿದೆ.





