ಕೊಪ್ಪಳ: ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಪ್ರಕಾರ ಅಂಜನಾದ್ರಿ ಬೆಟ್ಟವನ್ನು ಹನುಮಂತರ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿರುವ ಆಂಜನೇಯದ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ.
ಆದರೆ ಆಂಜನೇಯನ ದರ್ಶನ ಪಡೆಯಬೇಕಾದರೆ ಬೆಟ್ಟದಲ್ಲಿರುವ 575 ಮೆಟ್ಟಿಲುಗಳನ್ನು ಹತ್ತಲೇಬೇಕು. ಆದರೆ ವೃದ್ಧರು, ಅನಾರೋಗ್ಯ ಪೀಡಿತರು ಬೆಟ್ಟ ಹತ್ತಿ ದರ್ಶನ ಪಡೆಯಲು ತುಂಬಾ ಕಷ್ಟಕರವಾಗಿದೆ.
ಹೀಗಾಗಿ ಬೆಟ್ಟಕ್ಕೆ ರೂಪ್‌ವೇ ನಿರ್ಮಿಸುವಂತೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಬೇಡಿಕೆ ಈಡೇರುವ ಕಾಲ ಸನಿಹಿತವಾಗಿದ್ದು, ರೋಪ್‌ವೇ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.
ಮೊದಲ ಹಂತದಲ್ಲಿ ಒಂದು ರೂಪ್‌ವೇ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಮೂರು ಕಿಲೋ ಮೀಟರ್ ರೋಪ್‌ವೇಯನ್ನು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆ.
ಇದರಿಂದ ಒಂದು ಗಂಟೆಯಲ್ಲಿ 800 ಜನರನ್ನು ಅಂಜನಾದ್ರಿ ಬೆಟ್ಟದ ಮೇಲೆ ತಲುಪಿಸಬಹುದಾಗಿದೆ.





