ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ.
ಗ್ರಾಚ್ಯುಟಿ ಮತ್ತು ಗಳಿಕೆ ತಜೆ ನಗದೀಕರಣಕ್ಕಾಗಿ ಸರ್ಕಾರದಿಂದ 244.05 ಕೋಟಿ ರೂ ಹಣ ಪಾವತಿಯಾಗಿದೆ.
2020ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಾಕಿ ಹಣದ ಚೆಕ್‌ನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಡುಗಡೆ ಮಾಡಿದ್ದಾರೆ.
ಈ ಮೂಲಕ ಒಟ್ಟು 11,694 ನಿವೃತ್ತ ನೌಕರರ ಹಣ ಬಿಡುಗಡೆಯಾಗಿದ್ದು, ಇಂದಿನಿಂದಲೇ ಆರ್‌ಟಿಜಿಎಸ್ ಹಾಗೂ ಚೆಕ್ ಮುಖಾಂತರ ನಿವೃತ್ತ ಸಿಬ್ಬಂದಿಗೆ ಹಣ ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.