ಬೆಂಗಳೂರು: ರಾಜ್ಯ ಸರ್ಕಾರ ಯುಗಾದಿ ಹಬ್ಬಕ್ಕೂ ಮುನ್ನವೇ ಸಿಎಂ, ಸಚಿವರು, ಶಾಸಕರು, ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ಬಿಗ್ ಗಿಫ್ಟ್ ನೀಡಿದೆ.
ವೇತನ ಮಸೂದೆ ಮಂಡನೆಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ ಮತ್ತು ಕರ್ನಾಟಕ ವಿಧಾನಮಂಡಲದವರ ಸಂಬಳ, ಪಿಂಚಣಿ ಹಾಗೂ ಭತ್ಯೆಗಳ ತಿದ್ದುಪಡಿ ಮಸೂದೆಯ ಕಡತಕ್ಕೆ ಗವರ್ನರ್ ಅಂಕಿತ ಹಾಕಿದ್ದಾರೆ.
ಇನ್ನು ಮಾಹಿತಿಯ ಪ್ರಕಾರ ಸಿಎಂ ಸಿದ್ದರಾಮಯ್ಯ ಕಳೆದ ಎರಡು ವರ್ಷಗಳಲ್ಲಿ ವಿಮಾನ-ಹೆಲಿಕಾಪ್ಟರ್‌ನಲ್ಲಿ ಸಂಚರಿಸಲು ಸರ್ಕಾರ 31 ಕೋಟ ಖರ್ಚು ಮಾಡಿದೆ. ಇದಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಜನರ ತೆರಿಗೆ ಹಣವನ್ನು ಸರ್ಕಾರ ದಿಕ್ಕಾಪಾಲಾಗಿ ಖರ್ಚು ಮಾಡುತ್ತಿದ್ದು, ಜನತೆ ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.





