Mysore
22
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಸರ್ಕಾರದ ಪ್ರೋತ್ಸಾಹ : ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು : ಭೂಮಿಯ ಫಲವತ್ತತೆ ಹಾಗೂ ಹವಾಮಾನದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಸಾಯನಿಕ ಮುಕ್ತ ಕೃಷಿಯತ್ತ ಗಮನಹರಿಸಬೇಕಾಗಿದ್ದು. ರಾಜ್ಯ ಸರ್ಕಾರವು ನೈಸರ್ಗಿಕ ಹಾಗೂ ಸಾವಯವ ಕೃಷಿಯ ಜಾಗೃತಿ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು.

ವಿಕಾಸಸೌಧದಲ್ಲಿ ಸುಭಾಷ್ ಪಾಳೇಕರ್ ಕೃಷಿಯ ಸಾಧಕ-ಬಾಧಕಗಳ ಬಗ್ಗೆ ತಜ್ಞರು, ಅನುಭವಿಗಳು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಚಿವರು ನಾಲ್ಕೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಯೋಗಗಳನ್ನು ಹೆಚ್ಚಿಸುವ ಯೋಜನೆಗಳ ಅನುಷ್ಠಾನಕ್ಕೆ ಸೂಚನೆ ನೀಡಿದರು.

ನೈಸರ್ಗಿಕ ಕೃಷಿ ತಜ್ಞರಾದ ಸುಭಾಷ್ ಪಾಳೇಕರ್ ಅವರ ಅಭಿಪ್ರಾಯವನ್ನ ಅಲಿಸಿದ ಕೃಷಿ ಸಚಿವರು ತಕ್ಷಣವೇ ಸಂಪೂರ್ಣ ಕೃಷಿ ಪದ್ದತಿಯನ್ನ ಬದಲಾಯಿಸುವುದು ಕಷ್ಟ ಆದರೆ, ಪ್ರತಿ ಗ್ರಾಮದಲ್ಲೂ ಪ್ರಾಯೋಗಿಕವಾಗಿ ರೈತರ ಜಮೀನುಗಳನ್ನು ಭಾಗಶಃ ರಾಸಾಯನಿಕ ಮುಕ್ತವಾಗಿ ಪರಿವರ್ತಿಸುವ ಅವಕಾಶವಿದ್ದು ಇಲಾಖೆ ಮೂಲಕವು ಈ ಬಗ್ಗೆ ಜಾಗೃತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಸಾವಯವ ಕೃಷಿ ವಿಸ್ತರಣೆ ಜೊತೆಗೆ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಪದ್ದತಿಯ ಅಳವಡಿಸುವ ಬಗ್ಗೆಯು ಪ್ರಾತ್ಯಕ್ಷಿಕೆ ಹಾಗೂ ಕಾರ್ಯಗಾರಗಳನ್ನ ಏರ್ಪಡಿಸಲು ಇಲಾಖಾಧಿಕಾರಿಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.

ಇದ್ದಕ್ಕೂ ಮುನ್ನ ಮಾತನಾಡಿದ ನೈಸರ್ಗಿಕ ಕೃಷಿ ವಿಜ್ಞಾನಿ ಡಾ. ಸುಭಾಷ್ ಪಾಳೇಕರ್, ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತತೆ ನಾಶವಾಗುತ್ತಿದ್ದು ತಿನ್ನುವ ಆಹಾರ ಕೂಡ ವಿಷಕಾರಿಯಾಗುತಿರುವುದರಿಂದ ಜೀವಾಮೃತಗಳ ಬಳಕೆಯ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಆರೋಗ್ಯ ಪೂರ್ಣ ಆಹಾರ ಬೆಳೆಯುವ ಪದ್ದತಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಿದರು.

ದೇಶದಲ್ಲಿ ಅಹಾರೋತ್ಪದಾನೆ ಸ್ವಾವಲಂಭಿ ಮಾರ್ಗದಲ್ಲಿದ್ದರೂ ಅತಿಯಾದ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಮಣ್ಣಿನಲ್ಲಿ ಇಂಗಾಲದ ಅಂಶ ಕಡಿಮೆಯಾಗಿ ಉಪ್ಪಿನಾಂಶ ಹೆಚ್ಚಾಗುತ್ತಿದೆ. ಇದಕ್ಕೆ ತುರ್ತು ಕಡಿವಾಣ ಹಾಕದಿದ್ದರೆ ಮಾನವ ಕುಲಕ್ಕೆ ಅಪಾಯವಾಗಬಲ್ಲದು ಎಂದು ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ರೈತರಲ್ಲಿ ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸಿ ನೈಸರ್ಗಿಕ ಕೃಷಿಯತ್ತ ಆಕರ್ಷಿಸಬೇಕು. ಅತ್ಯಂತ ತೀರ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ದೊರೆಯುವುದರಿಂದ ಕೃಷಿಕರಿಗೆ ದೇಶಕ್ಕೆ ಸಾಮಾನ್ಯ ಜನರಿಗೆ ಬಹು ಉಪಕಾರಿ ಎಂದರು.

ದೇಶದ ಯಾವುದೇ ಭಾಗದಲ್ಲಿ ಬೇಕಾದರು ತಾವು ಸಂಶೋಧಿಸಿರುವ ಈ ಪದ್ದತಿಯನ್ನು ಜಾರಿಗೊಳಿಸಬಹುದಾಗಿದ್ದು. ರಾಸಾಯನಿಕಗಳಿಗೆ ಎದುರಾಗಿ ಸಹಜತೆಯಿಂದಲೇ ಕೃಷಿ ಮಾಡುವುದನ್ನು ರೂಡಿಸಿಕೊಳ್ಳಲು ಸಹಕರಿಸಬೇಕೆಂದು ಸುಭಾಷ್ ಪಾಳೇಕರ್ ಮನವಿ ಮಾಡಿದರು.

ಮಾಜಿ ಶಾಸಕರಾದ ಡಿ.ಆರ್.ಪಾಟೀಲ್ ಮಾತನಾಡಿ, ಸುಭಾಷ್ ಪಾಳೇಕರ್ ಅವರ ಕೃಷಿ ಪದ್ದತಿಯ ಲಾಭಗಳ ಬಗ್ಗೆ ವಿವರಿಸಿ ಇದ್ದನ್ನು ಪ್ರೋತ್ಸಾಹಿಸಲು ಸರ್ಕಾರ ಕೂಡ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.

ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಯುಕ್ತರಾದ ವೈ.ಎಸ್.ಪಾಟೀಲ್, ನಿರ್ದೇಶಕರಾದ ಡಾ.ಜಿ.ಟಿ.ಪುತ್ರ, ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಅಧಿಕಾರಿಗಳು, ಕೃಷಿ ತಜ್ಞರು ಹಾಜರಿದ್ದರು.

Tags:
error: Content is protected !!