Mysore
33
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲವಿಲ್ಲ: ಡಿಕೆ ಶಿವಕುಮಾರ್‌

ಬೆಂಗಳೂರು: ಮಾರ್ಚ್‌ 22 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಕಲಾಪದ ವೇಳೆ ವಿಪಕ್ಷ ನಾಯಕ ನಾರಾಯಣಸ್ವಾಮಿ ಮಾತನಾಡಿ, ಮಾರ್ಚ್‌ 22ರಂದು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಅಂದಿನ ದಿನ ಎಸ್‌ಎಸ್‌ಎಲ್‌ಸಿ ಸೇರಿ ಅನೇಕ ಪರೀಕ್ಷೆಗಳು ನಡೆಯಲಿವೆ. ಈ ಬಂದ್‌ನಿಂದ ವಿದ್ಯಾರ್ಥಿಗಳು ಭಯ ಭೀತರಾಗಿದ್ದಾರೆ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್‌ ಅವರು, ಸದ್ಯಕ್ಕೆ ಬಂದ್‌ ಮಾಡುವ ಅವಶ್ಯಕತೆ ಇರಲಿಲ್ಲ. ಬಂದ್‌ ವಿಚಾರವಾಗಿ ಸರ್ಕಾರದ ಜೊತೆ ಕೂತು ಮಾತನಾಡಿದರೇ ಆಗುತ್ತಿತ್ತು. ಅಧಿಕಾರಿಗಳ ಜೊತೆ ಸಂಘಟನೆಗಳು ಮತ್ತೊಮ್ಮೆ ಮಾತನಾಡಿ ಹೇಳಿಕೆ ಕೊಡೋದಾಗಿ ತಿಳಿಸಿದರು.

 

Tags:
error: Content is protected !!