ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧಿಯಾಗಿದ್ದು ನಟಿ ರನ್ಯಾರಾವ್ ಅವರು 2023ರ ಜೂನ್‌ನಿಂದ ಇಲ್ಲಿಯವರೆಗೂ 52 ಬಾರಿ ದುಬೈಗೆ ಹೋಗಿ ಬಂದಿದ್ದರೂ ಎಂಬ ಮಾಹಿತಿ ಡಿಆಐ ತನಿಖೆಯಿಂದ ಬೆಳಕಿಗೆ ಬಂದಿದೆ.
ಹೌದು, ಆರೋಪಿ ರನ್ಯಾ ರಾವ್ 2021 ರಿಂದ 2025ರವರೆಗೂ ವಿದೇಶಕ್ಕೆ ಪ್ರಯಾಣ ಮಾಡಿದ ಲೆಕ್ಕ ದೊರೆತಿದ್ದು, 2021ರಲ್ಲಿ ಒಂದು ಬಾರಿ ಕುಟುಂದ ಜೊತೆ ವಿದೇಶಕ್ಕೆ ಹೋಗಿದ್ದರು. ಬಳಿಕ 2023ರ ಜೂನ್‌ನಿಂದ ಇಲ್ಲಿಯರೆಗೂ ಒಟ್ಟು 52 ಬಾರಿ ದುಬೈ ಪ್ರಯಾಣ ಮಾಡಿದ್ದರು. ಅದರಲ್ಲಿ 45 ಬಾರಿ ಒಂದೇ ದಿನದಲ್ಲಿ ದುಬೈಗೆ ಹೋಗಿ ಅದೇ ದಿನಗಳಂದೇ ಭಾರತಕ್ಕೆ ಮರಳಿ ಬಂದಿದ್ದರು. ಅಲ್ಲದೇ ತಿಂಗಳಿಗೆ ಕನಿಷ್ಠ 3 ಬಾರಿ ದುಬೈ ವಿಮಾನ ಹತ್ತುತ್ತಿದ್ದ ರನ್ಯಾ, ಕಳೆದ 5 ತಿಂಗಳಲ್ಲಿ 11 ಬಾರಿ ದುಬೈಗೆ ತೆರಳಿದ್ದರು. ಆದರೆ 2024r ನವೆಂಬರ್‌ನಿಂದ 2025 ಮಾರ್ಚ್‌ವರೆಗೆ ರನ್ಯಾ ಪ್ರಯಾಣ ಮಾಡಿದ್ದ ಮಾಹಿತಿ ಇದೀಗ ಲಭ್ಯವಾಗಿದೆ.
2024ರ ನವೆಂಬರ್‌ನಿಂದ 2025ರ ಮಾರ್ಚ್‌ನವರೆಗೂ ಯಾವ್ಯಾವ ದಿನಗಳಲ್ಲಿ ರನ್ಯಾ ಪ್ರಯಾಣ?
2024ರ ನವೆಂಬರ್.13
2024ರ ಡಿಸೆಂಬರ್.12
2024ರ ಡಿಸೆಂಬರ್.20
2024ರ ಡಿಸೆಂಬರ್.27
2025ರ ಜನವರಿ.7
2025ರ ಜನವರಿ.11
2025ರ ಜನವರಿ.16
2025ರ ಫೆಬ್ರವರಿ.10
2025ರ ಫೆಬ್ರವರಿ.12
2025ರ ಫೆಬ್ರವರಿ.18
2025ರ ಮಾರ್ಚ್.3