Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಚಿನ್ನ ಕಳ್ಳಸಾಗಣೆ ಕೇಸ್:‌ ನಟಿ ರನ್ಯಾಗೆ ರಾಜಕಾರಣಿಗಳ ನಂಟು

ಬೆಂಗಳೂರು: ವಿದೇಶದಿಂದ ಅಕ್ರಮ ಚಿನ್ನ ಸಾಗಟ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ ಅವರ ಬಂಧನವಾಗಿದೆ. ಡಿಆರ್‌ಐ(ಕಂದಾಯ ಗುಪ್ತಚರ ನಿರ್ದೇಶನಾಲಯ)ಅಧಿಕಾರಿಗಳು ನಟಿಯನ್ನು ಬಂಧಿಸಿದ್ದು, ಇದೀಗ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ.

ವಿದೇಶಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ನಟಿ, ಚಿನ್ನ ಕಳ್ಳಸಾಗಣಿಕೆ ಕೇಸ್‌ನಲ್ಲಿ ಸಿಕ್ಕಿಹಾಕಿಹೊಂಡಿದ್ದಾರೆ. ಈ ನಡುವೆ ಖ್ಯಾತ ರಾಜಕಾರಣಿಯೊಬ್ಬರ ಹೆಸರು ಕೂಡು ಕೇಸ್‌ನಲ್ಲಿ ತುಳುಕುಹಾಕಿಕೊಂಡಿದ್ದು, ಆ ರಾಜಕಾರಣಿಗೆ ನೀಡುವುದಕ್ಕಾಗಿಯೇ ನಟಿ ಚಿನ್ನ ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ತನಿಖಾ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ರಾಜಕಾರಣಿಯ ಬೆನ್ನು ಬೀಳಲು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ನಟಿ ರನ್ಯಾ ರಾವ್‌ ಅವರು, ಅಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ ತಮ್ಮ ಹೆಸರನ್ನು ಹರ್ಷವರ್ಧಿನಿ ರನ್ಯಾ, ಉದ್ಯಮಿ ಕೆ.ಎಸ್‌ ಹೆಗ್ದೇಶ್‌ ಅವರ ಪುತ್ರಿ ಎಂದು ಉಲ್ಲೇಖಿಸಿದ್ದಾರೆ.

ದ್ವಿತೀಯ ಪಿಯುಸಿವರೆಗೂ ಓದಿದ್ದು, ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಜತೆಗೆ ವನ್ಯಜೀವಿ ಛಾಯಾಗ್ರಾಹಕಿ. ದುಬೈನಲ್ಲಿ ರಿಯಲ್‌ ಎಸ್ಟೇಟ್ ಕೆಲಸ ಮಾಡುತ್ತಿದ್ದೇನೆ. ವಾಸ್ತುಶಿಲ್ಪಿ ಜತಿನ್‌ ಹುಕ್ಕೇರಿ ಅವರನ್ನು ವಿವಾಹವಾಗಿದ್ದು, ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದೇವೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

Tags:
error: Content is protected !!