ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ಶುಕ್ರವಾರ ಗ್ರಾಮ್‌ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ ಶನಿವಾರ 920 ರೂಗಳಷ್ಟು ತಗ್ಗಿದೆ.
ಎರಡು ದಿನದಲ್ಲಿ ಒಂದೂವರೆ ಸಾವಿರ ರೂ ಗೂ ಅಧಿಕದಷ್ಟು ಬೆಲೆ ಕಡಿಮೆ ಆಗಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆ ಕುಸಿದಿದೆ. ಬೆಳ್ಳಿ ಬೆಲೆಯಂತೂ ಮಹಾ ಕುಸಿತ ಕಂಡಿದೆ. ಒಂದೇ ದಿನ 45 ರೂಗಳಷ್ಟು ಬೆಲೆ ಇಳಿಕೆ ಆಗಿದೆ. ಎರಡು ದಿನದಲ್ಲಿ ಬೆಳ್ಳಿ ಬೆಲೆ ಬರೋಬ್ಬರಿ 60 ರೂಗಳಷ್ಟು ತಗ್ಗಿದೆ.
ಭಾರತದಲ್ಲಿ ಸದ್ಯ ಸರಾಸರಿ 10 ಗ್ರಾಮ್‌ನ 22 ಕ್ಯಾರಟ್ ಚಿನ್ನದ ಬೆಲೆ 1,47,200 ರುಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,60,580 ರುಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 35,000 ರೂ. ಇದೆ.
ಮೈಸೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,47,200 ರೂ. ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಗೆ 35,000 ರೂ. ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 35,000 ರೂ ಇದೆ.
ಭಾರತದಲ್ಲಿರುವ ಚಿನ್ನದ ಬೆಲೆ (ಜನವರಿ 31ಕ್ಕೆ)
24 ಕ್ಯಾರಟ್: 1,60,580 ರೂ.
22 ಕ್ಯಾರಟ್: 1,47,200 ರೂ.
ಬೆಳ್ಳಿ ಬೆಲೆ
100 ಗ್ರಾಂ.ಗೆ 35,000 ರೂ
1 ಕೆ.ಜಿ.ಗೆ: 3,35,000 ರೂ.





