Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಹೈದರಾಬಾದ್‌ನಲ್ಲಿ ಬಾಲಕಿ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಸೆರೆ

ಹೈದರಾಬಾದ್:‌ 10 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಸಂಬಂಧ 10 ಜನರನ್ನು ಬಂಧಿಸಲಾಗಿದೆ. ಬಾಲಕಿ ಈಗ ಗರ್ಭಿಣಿಯಾಗಿದ್ದು, ಆರೋಪಿಗಳು ಅತ್ಯಾಚಾರವೆಸಗುವಾಗ ಬಾಲಕಿಗೆ ಮಾದಕವಸ್ತು ಮಿಶ್ರಿತ ಪಾನೀಯಗಳನ್ನು ತಿನ್ನಿಸಿ ಅತ್ಯಾಚಾರವೆಸಗಿದ್ದರು ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಚಕ್ಕೋಲು ನರೇಶ್‌(26), ವಿಜಯ್‌ ಕುಮಾರ್(‌23), ಬಾಲಾಜಿ(23), ಗುಡ್ಡಂತಿ ಕೃಷ್ಣ(22) ಕಿರಣ್‌ ಕುಮಾರ್(‌26) ಬೊಳ್ಳೆಪೋಗು ಅಜಯ್‌ (23)‌, ಜೇಮ್ಸ್ ಕ್ಸೇವಿಯರ್(‌24), ದೀಪಕ್(‌25), ಸಬವತ್‌ ಹತ್ಯಾ ನಾಯ್ಕ್(‌25), ಇಂಜಮುರಿ ಮಧು(30) ಎಂದು ಗುರುತಿಸಲಾಗಿದೆ.

ಈ ಆರೋಪಿಗಳ ಗುಂಪು, ನಾಲ್ಕನೇ ತರಗತಿ ಬಾಲಕಿಯ ಜೊತೆ ಸ್ನೇಹ ಬೆಳೆಸಿ, ಆಕೆಯನ್ನು ಅಪಹರಿಸಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅಲ್ಲದೆ, ಮಾದಕ ತುಂಬಿದ ಪಾನೀಯಗಳನ್ನು ಸೇವಿಸುವಂತೆ ಒತ್ತಾಯಿಸಿ ಕುಡಿಸಿದ್ದರು. ನಿರಂತರವಾಗಿ ಅತ್ಯಾಚಾರ ನಡೆಸಿದ್ದರಿಂದ ಆ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ ದ್ವಿಚಕ್ರವಾಹನ ಸೇರಿದಂತೆ ಮೊಬೈಲ್‌, ವಾಹನಗಳು, ಸಿಮ್‌ ಕಾರ್ಡ್‌ಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಾಗಿರುವ ಎಲ್ಲಾ ಆರೋಪಿಗಳು ಅಪರಾಧ ಚುಟುವಟಿಕೆಗಳ ಇತಿಹಾಸ ಹೊಂದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags: