Mysore
20
overcast clouds

Social Media

ಭಾನುವಾರ, 25 ಜನವರಿ 2026
Light
Dark

ರಾಜಣ್ಣ ದೂರು ನೀಡಲಿ, ತನಿಖೆ ನಡೆಸುತ್ತೇವೆ: ಜಿ.ಪರಮೇಶ್ವರ್‌

ಬೆಂಗಳೂರು: ಹನಿಟ್ರ್ಯಾಪ್‌ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್‌.ರಾಜಣ್ಣ ದೂರು ನೀಡಲಿ, ಬಳಿಕ ತನಿಖೆ ನಡೆಸುತ್ತೇವೆ. ಅವರು ದೂರು ನೀಡದೆ ನಾನೇನು ಮಾಡಲಿ, ನೀವೂ ಎಷ್ಟು ಬಾರಿ ತಿರುಗಿಸಿ, ಮುರುಗಿಸಿ ಕೇಳಿದು ಅಷ್ಟೇ ಎಂದು ಗೃಹ ಸಚಿವ  ಡಾ.ಜಿ.ಪರಮೇಶ್ವರ್‌ ಅವರು ತಿಳಿಸಿದ್ದಾರೆ.

ನಗರದಲ್ಲಿ ಇಂದು(ಮಾರ್ಚ್‌.25) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕಿಯೆ ನೀಡಿದ ಅವರು, ರಾಜಣ್ಣ ದೂರು ನೀಡದ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರಿಗೆ ಯಾವಾಗ ದೂರು ನೀಡಬೇಕು ಎನ್ನಿಸುತ್ತದೆ ಆಗ ದೂರು ನೀಡುತ್ತಾರೆ. ಅವರು ದೂರು ನೀಡಿದ ನಂತರವೇ ನಾವು ತನಿಖೆ ನಡೆಸಲು ಸಾಧ್ಯ. ಆದರೆ ಹನಿಟ್ರ್ಯಾಪ್‌ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಒತ್ತಡವೂ ಇಲ್ಲ ಎಂದು ಹೇಳಿದರು.

ನನ್ನ ರಾಜ್ಯದ ಗೃಹ ಮಂತ್ರಿಯಾಗಿ ನನ್ನ ಕೆಲಸ ತನಿಖೆ ಘೋಷಣೆ ಮಾಡುವುದಾಗಿದೆ. ಯಾವ ಹಂತದ ತನಿಖೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಫೋನ್‌ ಟ್ಯಾಪಿಂಗ್‌ ಬಗ್ಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವ ಸಚಿವರಾಗಲಿ ಅಥವಾ ಶಾಸಕರಾಗಲಿ ಯಾವುದೇ ಠಾಣೆಯಲ್ಲೂ ದೂರು ನೀಡಿಲ್ಲ. ಒಂದು ವೇಳೆ ಪೊಲೀಸ್‌ ಠಾಣೆಗೆ ದೂರು ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags:
error: Content is protected !!