Mysore
28
clear sky

Social Media

ಬುಧವಾರ, 28 ಜನವರಿ 2026
Light
Dark

ಡಿಸಿಎಂ ಡಿಕೆಶಿಯಿಂದ ಆಪರೇಷನ್‌ ಆರೋಪ: ಮಾಜಿ ಸಂಸದ ಶ್ರೀರಾಮುಲು ಹೇಳಿದ್ದಿಷ್ಟು!

ಬಳ್ಳಾರಿ: ಕ್ರಿಮಿನಲ್‌ ಬ್ಯಾಗ್ರೌಂಡ್‌ ಬಗ್ಗೆ ಸಾಚಾರಂತೆ ಮಾತನಾಡುತ್ತಿರುವ ಆ ವ್ಯಕ್ತಿಯ ದಾಖಲೆಗಳು ನನ್ನ ಬಳಿಯಿದೆ. ಸಮಯ ಬಂದಾಗ ಸಾಕ್ಷಿತ ಸಮೇತ ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಜನಾರ್ಧನ ರೆಡ್ಡಿ ವಿರುದ್ಧ ಕಿಡಿಕಾರಿದರು.

ಸತೀಶ್‌ ಜಾರಕಿಹೊಳಿಯನ್ನು ಮಣಿಸಲು ಡಿಕೆಶಿಯಿಂದ ಶ್ರೀರಾಮುಲು ಆಪರೇಷನ್‌ ಎಂದು ಶಾಸಕ ಜನಾರ್ಧನ ರೆಡ್ಡಿ ಹೊಸ ಬಾಂಬ್‌ ಸಿಡಿಸಿದ ಬೆನ್ನಲ್ಲೇ ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಅವರು, ಜನಾರ್ಧನ ರೆಡ್ಡಿ ಆರೋಪಗಳಿಗೆ ಕೌಂಟರ್‌ ಮೇಲೆ ಕೌಂಟರ್‌ ಕೊಟ್ಟಿದ್ದಾರೆ.

ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಮಟ್ಟ ಹಾಕೋದಕ್ಕೆ ನಾನ್ಯಾರು? ಕಾಂಗ್ರೆಸ್‌ನಲ್ಲೂ ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ನಾನು ಸೋತಿದ್ದರೂ ನನ್ನ ಪಾರ್ಟಿಯಲ್ಲಿ ಪ್ರಬಲವಾಗಿದ್ದೇನೆ. ಸತೀಶ್‌ ಅವರನ್ನು ತೊಂದರೆ ಕೊಡೋದಕ್ಕೆ ಡಿಕೆಶಿ ನನ್ನ ಬಳಕೆ ಮಾಡಿಕೊಳ್ತಾರೆ ಅನ್ನೋದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಯಾವುದೇ ಕಳಂಕ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಎರಡು ಬಾರಿ ಸೋತಿರುವ ನೋವಿನಲ್ಲಿರುವ ನನಗೆ ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಕಿಡಿಕಾರಿದರು.

ಇನ್ನು ಬಿಜೆಪಿ ಪಕ್ಷ ಬಿಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ. ಪ್ರಧಾನಿ ಹಾಗೂ ವರಿಷ್ಠರನ್ನು ಭೇಟಿ ಮಾಡ್ತೀನಿ ಎಂದು ಹೇಳಿದೆ. ಇದೆಲ್ಲವನ್ನು ಕೇಂದ್ರ ನಾಯಕರಿಗೆ ಹೇಳುತ್ತೇನೆ. ಸುಳ್ಳಿನ ಮುಂದೆ ಸತ್ಯ ಸೋಲುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!