Mysore
28
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಅರಣ್ಯ ಅಪರಾಧ: ಎಫ್‌ಐಆರ್‌ ದಾಖಲಿಸಲು ʼಗರುಡಾಕ್ಷಿʼ ಆನ್‌ಲೈನ್‌ ತಂತ್ರಾಂಶ

ಬೆಂಗಳೂರು: ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಆನ್‌ಲೈನ್‌ ಮೂಲಕವೇ ಎಫ್‌ಐಆರ್‌ ದಾಖಲಿಸಿ ಮೇಲ್ವಿಚಾರಣೆ ನಡೆಸಲು ʼಗರುಡಾಕ್ಷಿʼ ಎಂಬ ಹೊಸ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಹಾಗೂ ಮೇಲ್ವಿಚಾರಣೆ ನಡೆಸಲು ಈ ತಂತ್ರಾಂಶ ಉಪಯೋಗವಾಗಲಿದೆ.

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು, ಅರಣ್ಯ ಅಪರಾಧಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಆನ್‌ಲೈನ್‌ ಮಾದರಿಯ ತಂತ್ರಾಂಶವನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವೈಲ್ಡ್‌ ಲೈಫ್‌ ಟ್ರಸ್ಟ್‌ ಇಂಡಿಯಾ ಸಹಯೋಗದೊಂದಿಗೆ ಗರುಡಾಕ್ಷಿ ಎಂಬ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಸಚಿವ ಈಶ್ವರ್‌ ಖಂಡ್ರೆ ನಾಳೆ ಇದಕ್ಕೆ ಚಾಲನೆ ನೀಡಲಿದ್ದಾರೆ.

ಗರುಡಾಕ್ಷಿ ಆನ್‌ಲೈನ್‌ ಎಫ್‌ಐಆರ್‌ ವ್ಯವಸ್ಥೆಯು ವನ್ಯಜೀವಿ ಅಪರಾಧಗಳನ್ನು ಎಡೆಗಟ್ಟುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಶಿ ವಿಭಾಗ, ಮತ್ತು ಮಲೆ ಮಹದೇಶ್ವರ ವನ್ಯಜೀವಿ ವಿಭಾಗಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

Tags:
error: Content is protected !!