Mysore
14
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

Film Festival | ಶಬಾನ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸ ಪ್ರಶಸ್ತಿ

ಬೆಂಗಳೂರು : ಭಾರತದ ಹೆಸರಾಂತ ಚಲನಚಿತ್ರ ನಟಿ ಶಬನಾ ಅಜ್ಮಿ ಅವರನ್ನು ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ 2024-25ನೇ ಸಾಲಿನ ಬೆಂಗಳೂರು 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಬನಾ ಅಜ್ಮಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಬನಾ ಅಜ್ಮಿ ಅವರು ಅತ್ಯುತ್ತಮ ನಟನೆಗಾಗಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದು, ಅತಿ ಹೆಚ್ಚು ಪ್ರಶಸ್ತಿ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ರಾಷ್ಟ್ರೀಯ ಪ್ರಶಸ್ತಿಗಳು: 1975 – ಅಂಕುರ್, 1983 – ಆರ್ಥರ್, 1984 – ಖಂದಾರ್, 1985 – ಪಾರ್, 1999 – ಗಾಡ್ಮದರ್ ಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಶಸ್ತಿಗಳು: 1993 ಉತ್ತರ ಕೊರಿಯಾದಲ್ಲಿ ಲಿಬಾಸ್‍ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ, 1994 ಇಟಲಿಯ ಟೌರಿಮಾ ಆರ್ಟೆ ಉತ್ಸವದಲ್ಲಿ ಗೌತಮ್ ಘೋಸ್ ಅವರ ಪಟಾಂಗ್‍ಗೆ ಅತ್ಯುತ್ತಮ ನಟಿ ಪ್ರಶಸ್ತಿ, 1996 ಚಿಕಾಗೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಂಕಿಯ ಅತ್ಯುತ್ತಮ ನಟಿಗಾಗಿ ಸಿಲ್ವರ್ ಹ್ಯೂಗೋ ಪ್ರಶಸ್ತಿ, 1996 ಫೀಚರ್ ಫಿಲ್ಮ್‍ನಲ್ಲಿ ಅತ್ಯುತ್ತಮ ನಟಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ.

Tags:
error: Content is protected !!